ನವದೆಹಲಿ: ನವದೆಹಲಿಯ ‘ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಗೆ ಸೇರಲು ಬಾಂಗ್ಲಾದೇಶ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದೆ.
ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಆಯೋಗ (ಬಿಟಿಆರ್ಸಿ)ದ ಅಧ್ಯಕ್ಷ ಶಹಜಹಾನ್ ಮಹಮೂದ್ ಮತ್ತು ಭಾರತೀಯ ಹೈಕಮಿಶನರ್ ಹರ್ಷ ವರ್ಧನ್ ಶ್ರಿಗ್ಲಾ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಬಾಂಗ್ಲಾದೇಶ ಭಾರತ ಸರ್ಕಾರದ ‘ದಕ್ಷಿಣ ಏಷ್ಯಾ ಉಪಗ್ರಹ’ ಯೋಜನೆಗೆ ಔಪಚಾರಿಕವಾಗಿ ಸೇರಿಕೊಂಡಿದೆ. ಇಸ್ರೋ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪರ್ಕಕ್ಕೆ ತನ್ನ ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹಕ (ಗಿಎಸ್ಎಲ್ವಿ ಎಂಕೆ-೧೧) ಮೂಲಕ 2 ಟನ್ ತೂಕದ 12 ಕೆಯು (36 ಮೆಗಾಹರ್ಟ್ಸ್) ಉಪಗ್ರಹ ಉಡಾವಣೆ ಮಾಡಲಿದೆ ಎಂದು ಭಾರತದ ಉನ್ನತ ಆಯೋಗ ತಿಳಿಸಿದೆ.
ಉಪಗ್ರಹ ಯೋಜನೆ ಅಡಿಯಲ್ಲಿ ಟೆಲಿ-ಶಿಕ್ಷಣ, ಟೆಲಿ-ಔಷಧ, ಅಂತರ್ ಸರ್ಕಾರಿ ನೆಟ್ವಕ್ಗಳು, ವಿಪತ್ತು ಸಂದರ್ಭಗಳಲ್ಲಿ ತುರ್ತು ಸಂವಹನ, ದೂರದರ್ಶನ ಪ್ರಸಾರ ಮತ್ತು ಡಿಟಿಎಚ್ ಟಿವಿ ಸೇವೆಗಳನ್ನು ಪ್ರಸ್ತಾಪಿಸಿ ಅರ್ಜಿ ಸಲ್ಲಿಸಲಾಇದೆ.
ಈ ಯೋಜನೆಯಲ್ಲಿ ಭಾಗವಹಿಸುವ ಪ್ರತಿಯೊಂದು ದೇಶ ತನ್ನ ಸ್ವಂತ ಬಳಕೆಗೆ 36ರಿಂದ 54 ಮೆಗಾಹರ್ಟ್ಸ್ ಟ್ರಾನ್ಸ್ಪೋಂಡರ್ ಬಳಸಬಹುದು. ಪ್ರತಿ ರಾಷ್ಟ್ರ ತನ್ನದೇ ಕಂಟೆಂಟ್ ನಿರ್ಮಿಸಿ ಅದರ ಬಳಕೆಗೆ ಜವಾಬ್ದಾರರಾಗಿರುತ್ತಾರೆ.
ಪಾಕಿಸ್ಥಾನವನ್ನು ಹೊರತುಪಡಿಸಿ ‘ಭಾಗವಹಿಸುವ ರಾಷ್ಟ್ರಗಳು ಜನರ ಲಾಭಕ್ಕಾಗಿ ಮತ್ತು ಸಹಕಾರ ಹಾಗೂ ಸಹಯೋಗದ ಪ್ರಯತ್ನದಲ್ಲಿ’ ದಕ್ಷಿಣ ಏಷ್ಯಾದ ಎಲ್ಲ ರಾಷ್ಟ್ರಗಳು ಈ ಯೋಜನೆಯ ಭಾಗವಾಗಿರಲಿದ್ದಾರೆ ಎಂದು ಆಯೋಗ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.