ಮುಂಬಯಿ: ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಪೊಲೀಸರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಮಂಡಳಿಯೊಂದನ್ನು ಸ್ಥಾಪಿಸಿದೆ.
ಮಹಾರಾಷ್ಟ್ರ ಸರ್ಕಾರ ‘ಸ್ಟೇಟ್ ಪೊಲೀಸ್ ಕಂಪ್ಲೇಂಟ್ಸ್ ಅಥಾರಿಟಿ’(ಎಸ್ಪಿಸಿಎ)ಯನ್ನು ಸ್ಥಾಪಿಸಿದ್ದು, ಈ ಜನವರಿಯಿಂದಲೇ ಅದು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಪೊಲೀಸರ ವಿರುದ್ಧ 300 ದೂರುಗಳು ಇಲ್ಲಿ ದಾಖಲಾಗಿವೆ.
ಅಧಿಕಾರ ದುರ್ಬಳಕೆ, ಕಸ್ಟಡಿಯಲ್ಲಿ ದೌರ್ಜನ್ಯ, ಕಾನೂನು ಬಾಹಿರವಾಗಿ ಬಂಧನ ಹೀಗೆ ಹತ್ತು ಹಲವು ದೂರುಗಳು ಪೊಲೀಸರ ವಿರುದ್ಧ ಕೇಳಿ ಬರುತ್ತವೆ. ಇಂತಹ ದೂರುಗಳನ್ನು ಎಸ್ಪಿಸಿಎನಲ್ಲಿ ಜನರು ದಾಖಲಿಸಬಹುದಾಗಿದೆ ಮತ್ತು ಅವುಗಳ ತನಿಖೆಯನ್ನು ಎಸ್ಪಿಸಿಎ ನಡೆಸಲಿದೆ.
ದಶಕಗಳ ಹಿಂದೆಯೇ ಪೊಲೀಸರ ವಿರುದ್ಧದ ಪ್ರಕರಣಗಳ ತನಿಖೆಗೆ ಸ್ವತಂತ್ರ ಮಂಡಳಿಗಳನ್ನು ಸ್ಥಾಪಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಯಾವ ರಾಜ್ಯಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರಲಿಲ್ಲ.
ಎಸ್ಪಿಸಿಎನಲ್ಲಿ ನಿವೃತ್ತ ಹೈಕೋರ್ಟ್ ಜಡ್ಜ್ಗಳು, ನಿವೃತ್ತ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.