ತಿರುವನಂತಪುರಂ: ಕೇರಳದ ಕುನ್ನಂತಾನಂ ಗ್ರಾಮವನ್ನು ‘ಸಂಪೂರ್ಣ ಯೋಗ ಗ್ರಾಮ’ವನ್ನಾಗಿ ಪರಿವರ್ತಿಸಿ ರಾಷ್ಟ್ರೀಯ ದಾಖಲೆಯ ಪುಟವನ್ನು ಸೇರಿಸುವುದಕ್ಕಾಗಿ ಅಲ್ಲಿನ ದೇಗುಲಗಳು, ಚರ್ಚ್ಗಳು ಮತ್ತು ಎನ್ಜಿಓಗಳು ಶ್ರಮಪಡುತ್ತಿವೆ.
ತಿರುವಲ್ಲಾ ಮೂಲದ ಪ್ರಾಣೊವಂ ಯೋಗ ಸೆಂಟರ್ನ ಸಹಯೋಗದೊಂದಿಗೆ ಕುನ್ನಂತಾನಂ ಗ್ರಾಮ ಪಂಚಾಯತ್ ‘ಮೈ ವಿಲೇಜ್, ಹೆಲ್ದಿ ವಿಲೇಜ್’ ಎಂಬ ಯೋಜನೆಯನ್ನು ಆರಂಭಿಸಿದೆ. ಪ್ರಾಚೀನ ಆರೋಗ್ಯ ವ್ಯವಸ್ಥೆಯನ್ನು ಜನಪ್ರಿಯಗೊಳಿಸುವುದೇ ಇದರ ಉದ್ದೇಶ
ಪಂಚಾಯತ್ ಗ್ರಾಮದ ಸಮಸ್ತ ಜನರಿಗೂ ಉಚಿತ ಯೋಗ ತರಬೇತಿಯನ್ನು ನೀಡುತ್ತಿದೆ. ಮೇ 31ರ ತನಕ ಗ್ರಾಮದ 15 ವಾರ್ಡ್ಗಳ 28 ಜಾಗಗಳಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಪಂಚಾಯತ್ ಅಧ್ಯಕ್ಷ ಕೆ.ಕೆ.ರಾಧಕೃಷ್ಣನ್ ಕುರುಪ್ ತಿಳಿಸಿದ್ದಾರೆ.
ದೇಗುಲ, ಚರ್ಚ್, ಅನಾಥಾಶ್ರಮ, ಮನೆ, ಕಾಲೋನಿಗಳಲ್ಲೂ ಮೆಗಾ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಯೋಗ ತರಬೇತುದಾರ ಎಂ.ಜಿ.ದಿಲೀಪ್ ಇದರ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.