ನವದೆಹಲಿ: ಗಂಗಾ ನದಿ ತಟದಲ್ಲಿರುವ ರೂರ್ಕಿ ಐಐಟಿಯು ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ 50 ಲಕ್ಷ ರೂಪಾಯಿಗಳ ಸಂಗ್ರಹ ಮಾಡುತ್ತಿದೆ. ‘ಸೇವ್ ಗಂಗಾ’ ಎಂಬ ಅಭಿಯಾನವನ್ನು ಈ ಐಐಟಿ ಆರಂಭಿಸಿದ್ದು, ವಿವಿಧ ಚಟುವಟಿಕೆಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಗಂಗೆಯ ಸ್ವಚ್ಛತೆಗೆ ಸರ್ಕಾರಗಳು ಹಮ್ಮಿಕೊಂಡಿರುವ ಕಾರ್ಯಗಳು ಅಷ್ಟು ಫಲ ನೀಡಿಲ್ಲದ ಕಾರಣ ತಮ್ಮಿಂದಾದ ಸೇವೆ ಮಾಡೋಣ ಎಂಬ ಉದ್ದೇಶದಿಂದ ‘ಸೇವ್ ಗಂಗಾ’ ಅಭಿಯಾನವನ್ನು ಇಲ್ಲಿನ ವಿದ್ಯಾರ್ಥಿಗಳು ಆರಂಭಿಸಿದ್ದಾರೆ. ಕ್ರೋಢಿಕರಿಸಿದ ಹಣದಲ್ಲಿ ಗಂಗಾ ನದಿಯ ತಟಗಳಲ್ಲಿ ಬಯೋ-ಟಾಯ್ಲೆಟ್ ನಿರ್ಮಿಸುವ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಈ ವಿದ್ಯಾರ್ಥಿಗಳದ್ದು.
ಕಾಲೇಜಿನ ಆನ್ವಲ್ ಫೆಸ್ಟ್ ಸಂದರ್ಭ, ವಿವಿಧ ಸ್ಪರ್ಧೆಗಳ ಮೂಲಕ ಹಣ ಸಂಗ್ರಹಿಸುವ ಯೋಜನೆ ಇದೆ, ಫ್ಯಾಕಲ್ಟಿಯವರೂ 10 ಲಕ್ಷ ಸಂಗ್ರಹಿಸಿಕೊಡುವ ಭರವಸೆ ನೀಡಿದ್ದಾರೆ, 2017ರ ಡಿಸೆಂಬರ್ ಹಣ ಸಂಗ್ರಹಕ್ಕೆ ಕಡೆಯ ದಿನವೆಂದು ನಿಗದಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.