ವಾರಂಗಲ್: ಮಹಾತ್ಮ ಗಾಂಧಿ ಪ್ರತಿಮೆ, 15 ಅಡಿ ಎತ್ತರದ ಕೆಂಪು ವರ್ಣದ ಸ್ತೂಪ, ಎತ್ತರದಲ್ಲಿ ನೇತಾಡುವ ಕತ್ತಿ ತೆಲಂಗಾಣದ ವಾರಂಗಲ್ ಜಿಲ್ಲೆಯ ಗಂಗದೇವಿಪಲ್ಲಿ ಎಂಬ ಪುಟ್ಟ ಗ್ರಾಮದ ಸ್ಫೂರ್ತಿಯನ್ನು ಸಾಂಕೇತಿಸುತ್ತದೆ.
ಒಂದು ಕಾಲದಲ್ಲಿ ನಕ್ಸಲ್ ಪೀಡಿತವಾಗಿದ್ದ ಈ ಗ್ರಾಮ ಅಭಿವೃದ್ಧಿಯ ಪಟ್ಟಿಯಲ್ಲಿ ಬಹಳ ಹಿಂದಿತ್ತು. ಆದರೀಗ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಈ ಗ್ರಾಮವನ್ನು ಉದಾಹರಣೆಯಾಗಿ ನೀಡಿ ದೇಶದ ಜನತೆಗೆ ಸ್ವಚ್ಛತೆಯ ಸಂದೇಶ ನೀಡುವಷ್ಟರ ಮಟ್ಟಿಗೆ ಈ ಗ್ರಾಮ ಬೆಳೆದು ನಿಂತಿದೆ.
ಕೆಲ ವಾರಗಳ ಹಿಂದೆ ಈ ಗ್ರಾಮಕ್ಕೆ 40 ಅಧಿಕಾರಿಗಳೊಂದಿಗೆ ಬಂದ ಸ್ವಚ್ಛ ಭಾರತ ಅಭಿಯಾನದ ನೇತೃತ್ವ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿ ಪರಮೇಶ್ವರಂ ಅಯ್ಯರ್ ಅವರು ನಿಜಕ್ಕೂ ಮೂಕವಿಸ್ಮಿತರಾದರು, ಏಕೆಂದರೆ ಸ್ವಚ್ಛ ಭಾರತದ ಆಶಯ ಈ ಗ್ರಾಮದಲ್ಲಿ 15 ವರ್ಷಗಳ ಹಿಂದೆಯೇ ಸಾಕಾರಗೊಂಡಿತ್ತು.
15 ವರ್ಷಗಳ ಹಿಂದೆಯೇ ಈ ಗ್ರಾಮದ ಟಾಯ್ಲೆಟ್ಗಳಲ್ಲಿ ಟ್ವಿನ್ ಪಿಟ್ ಟೆಕ್ನಾಲಜಿಯನ್ನು ಅವಡಿಸಲಾಗಿದೆ. 360 ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ 1,400 ಜನಸಂಖ್ಯೆಯಿದೆ. ಎಲ್ಲರೂ ಸಾಕ್ಷರರು.
ಈ ಗ್ರಾಮದ ಪಂಚಾಯತ್ ಬೋಡ್ನಲ್ಲಿ ಶೇ.100ರಷ್ಟು ಮನೆ ತೆರಿಗೆ ಪಾವತಿ, ಶೇ.100ರಷ್ಟು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಶೇ.100ರಷ್ಟು ಸಾಕ್ಷರತೆ ಸಾಧಿಸಲಾಗಿದೆ, ಶೇ.100ರಷ್ಟು ಶೌಚಾಲಯ ನಿರ್ಮಾಣ, ಶೇ.100ರಷ್ಟು ಉಳಿತಾಯ, ಶೇ.100ರಷ್ಟು ಮದ್ಯ ನಿಷೇಧ ಎಂಬ ಪಟ್ಟಿ ಕಾಣುತ್ತದೆ.
ಕುಟುಂಬ ಯೋಜನೆಯನ್ನು ಸಂಪೂರ್ಣವಾಗಿ ಇಲ್ಲಿ ಅಳವಡಿಸಲಾಗಿದ್ದು, ಪ್ರತಿ ಕುಟುಂಬವೂ ಕೇವಲ 2 ಮಕ್ಕಳನ್ನು ಮಾತ್ರ ಹೊಂದಿದೆ. ಗ್ರಾಮದಲ್ಲಿ ಎಡಿಎಂ ಮೆಶಿನ್ ಇದೆ, 1.ರೂಗೆ ಕುಡಿಯುವ ನೀರು ವಿತರಣಾ ಸೌಲಭ್ಯವೂ ಇದೆ.
26 ಸಮಿತಿಗಳನ್ನು ರಚಿಸಲಾಗಿದ್ದು, ಗ್ರಾಮದ ಸಂಪೂರ್ಣ ಅಭಿವೃದ್ಧಿ ಮತ್ತು ಕಲ್ಯಾಣಗಳ ಉಸ್ತವಾರಿಯನ್ನು ಇವುಗಳು ನೋಡಿಕೊಳ್ಳುತ್ತಿವೆ.
ಒಟ್ಟಿನಲ್ಲಿ ದೇಶಕ್ಕೆ ಒಂದು ಮಾದರಿ ಗ್ರಾಮವಾಗಿ ಗಂಗಾದೇವಿಪಲ್ಲಿ ಗ್ರಾಮ ತಲೆಯೆತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.