ಮುಂಬಯಿ: ಮುಂಬಯಿ ಛತ್ರಪತಿ ವಿಮಾನ ನಿಲ್ದಾಣದಲ್ಲಿ ಟಾಯ್ಲೆಟ್ ಮತ್ತು ನೆಲವನ್ನು ಶುಚಿಯಾಗಿಡಲು ಹೊಸ ವಿಧಾನವನ್ನು ಅಳವಡಿಕೆ ಮಾಡಲಾಗಿದೆ.
ಮುಂಬಯಿ ಮಿರರ್ ಪ್ರಕಾರ, ಮುಂಬಯಿ ವಿಮಾನ ನಿಲ್ದಾಣ ಆಡಳಿತ ಮಂಡಳಿ ಟಾಯ್ಲೆಟ್ಗಳಿಗೆ ಅಮೊನಿಯಾ ನಿಯಂತ್ರಣ ಬ್ಯಾಕ್ಟೀರಿಯಾ ಪರಿಚಯಿಸಿದೆ. ಈ ಪ್ರಕ್ರಿಯೆಯಿಂದ ವಿಮಾನ ನಿಲ್ದಾಣ ಪ್ರತಿ ದಿನ ಒಂದು ಲಕ್ಷ ಲೀಟರ್ ನೀರು ಉಳಿತಾಯ ಮಾಡುತ್ತಿದೆ.
ಈ ಬ್ಯಾಕ್ಟೀರಿಯಾಗಳು ಯೂರಿಕ್ ಆಸಿಡ್ ಶೇಖರಣೆಯಿಂದ ರಚಿತವಾದ ಅಮೋನಿಯಾವನ್ನು ನೈಟ್ರೋಜನ್ ಆಗಿ ಪರಿವರ್ತಿಸುತ್ತದೆ.
ಛತ್ರಪತಿ ವಿಮಾನ ನಿಲ್ದಾಣ ಈ ಪ್ರಕ್ರಿಯೆಯನ್ನು ಆರಂಭಿಸಿದ ಮೊದಲ ವಿಮಾನ ನಿಲ್ದಾಣವಾಗಿದೆ. ಪುರುಷರ ಟಾಯ್ಲೆಟ್ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್-2ನ 1,400 ಎಕರೆ ನೆಲವನ್ನು ಶುಚಿಗೊಳಿಸಲು ನೀರಿನ ಬದಲು ಮೈಕ್ರೋಬ್ಗಳ ಮಿಶ್ರವನ್ನು ಬಳಸಲಾಗುತ್ತದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.