ನವದೆಹಲಿ: ಕೇಂದ್ರ ಸರ್ಕಾರದ ಅನಾಣ್ಯೀಕರಣದ ನಂತರ ಭಾರತೀಯ ರಿಸರ್ವ ಬ್ಯಾಂಕ್ ಹೊಸ 10 ರೂ. ಮುಖಬೆಲೆಯ ಪಾಲಿಮರ್ ಆಧಾರಿತ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಈ ಹೊಸ ಪಾಲಿಮರ್ ಆಧಾರಿತ 10 ರೂ. ನೋಟುಗಳು ಹೆಚ್ಚು ಬಾಳ್ವಿಕೆ ಪಡೆಯಲಿದ್ದು, ಇದು ನಕಲು ಮಾಡಲು ಸುಲಭವಾಗುವುದಿಲ್ಲ. ಭಾರತದ ಐದು ನಗರಗಳಲ್ಲಿ ಇದರ ಪ್ರಯೋಗ ನಡೆಸಿದ ಬಳಿಕ ಈ ನೋಟನ್ನು ಪರಿಚಯಿಸಲಾಗುವುದು ಎಂದು ಆರ್ಬಿಐ ತಿಳಿಸಿದೆ.
ಪ್ಲಾಸ್ಟಿಕ್ ಆಧಾರಿತ 10 ರೂ. ಮುಖಬೆಲೆಯ ಬ್ಯಾಂಕ್ನೋಟ್ಗಳ ಮುದ್ರಣದ ಅನುಮೋದನೆಗೆ ಆರ್ಬಿಐಗೆ ಮನವಿ ಮಾಡಲಾಗಿದೆ ಎಂದು ಕಿರಿಯ ಹಣಕಾಸು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಲೋಕಸಭೆಗೆ ತಿಳಿಸಿದ್ದಾರೆ.
ಕೊಚಿ, ಜೈಪುರ, ಭುವನೇಶ್ವರ, ಮೈಸೂರು ಹಾಗೂ ಶಿಮ್ಲಾದಲ್ಲಿ ಹೊಸ 10 ರೂ. ಮುಖಬೆಲೆಯ ನೋಟುಗಳ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಸರಣಿಯ-2005 ನೋಟುಗಳು ಎರಡೂ ಬದಿಯ ಸಂಖ್ಯೆಯ ಪ್ಯಾನೆಲ್ ಮೇಲೆ ‘ಎಲ್’ ಅಕ್ಷರ ಹಾಗೂ ಗವರ್ನರ್ ಉರ್ಜಿತ್ ಪಟೇಲ್ರ ಸಹಿ ಹೊಂದಲಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಇದೇ ವೇಳೆ ಹಳೇ 10 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇರಲಿವೆ ಎಂದು ಮೇಘ್ವಾಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.