ಕೋಟಾ: ಮುಚ್ಚಲ್ಪಟ್ಟಿದ್ದ ತಮ್ಮ ಹೆತ್ತವರ ಮನೆಯಲ್ಲಿ 96,500.ರೂ ಹಳೆ ನೋಟುಗಳನ್ನು ಪತ್ತೆಹಚ್ಚಿರುವ ಅನಾಥ ಅಣ್ಣ-ತಂಗಿ ಈ ಹಣವನ್ನು ಬದಲಾಯಿಸಲು ಅವಕಾಶ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ರಾಜಸ್ಥಾನದ ಸರವಾಡ ಗ್ರಾಮದ 16 ವರ್ಷದ ಸೂರಜ್ ಬಂಜಾರ ಮತ್ತು ಆತನ ತಂಗಿ 12 ವರ್ಷದ ಸಲೋನಿ ತಂದೆ-ತಾಯಿಯನ್ನು ಕಳೆದುಕೊಂಡಿದ್ದು, ಮಕ್ಕಳ ಕಲ್ಯಾಣ ಸಮಿತಿಯ ವಸತಿಯೊಂದರಲ್ಲಿ ಇದ್ದಾರೆ.
ಇವರ ತಾಯಿಯನ್ನು 2013ರಲ್ಲಿ ಕೊಲೆ ಮಾಡಲಾಗಿದೆ, ತಂದೆ ಅದಕ್ಕೂ ಮುನ್ನವೇ ತೀರಿಕೊಂಡಿದ್ದರು.
ತಿಂಗಳ ಮೊದಲ ವಾರದಲ್ಲಿ ಇವರ ಹೆತ್ತವರ ಮನೆಯಲ್ಲಿ ಸರ್ವೆ ನಡೆಸಿದ್ದ ಪೊಲೀಸರಿಗೆ 96,500.ರೂ ಹಣ ಪತ್ತೆಯಾಗಿತ್ತು. ಇವೆಲ್ಲವೂ 1000 ಮತ್ತು 500ರ ಹಳೆ ನೋಟುಗಳಾಗಿವೆ.
ಈ ಹಿನ್ನಲೆಯಲ್ಲಿ ಅನಾಥ ಮಕ್ಕಳು ಈ ನೋಟುಗಳ ಬದಲಾವಣೆಗೆ ಮೋದಿಯವರ ಸಹಾಯವನ್ನು ನಿರೀಕ್ಷಿಸಿದ್ದಾರೆ.
ತನ್ನ ತಂಗಿಯ ಹೆಸರಲ್ಲಿ ಈ ಹಣವನ್ನು ಫಿಕ್ಸಡ್ ಡೆಪೋಸಿಟ್ ಮಾಡಲು ಸೂರಜ್ ಬಯಸಿದ್ದಾನೆ ಎನ್ನಲಾಗಿದೆ.
ಕೋಟ ಸಂಸದ ಓಂ ಬಿರ್ಲಾ ಅವರು ಈ ಅನಾಥ ಮಕ್ಕಳಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.