ಮೌಂಟ್ ಅಬು: ನಾನು ಹುಟ್ಟಿದ್ದು ಕರಾಚಿಯಲ್ಲಿ, ಆದರೆ ನನಗೆ ಶಿಸ್ತು ಮತ್ತು ಸಮರ್ಪಕ ಶಿಕ್ಷಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ನೀಡಿದೆ ಎಂದು ಹೆಮ್ಮೆಯಿಂದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತಿಳಿಸಿದ್ದಾರೆ.
ರಾಜಸ್ಥಾನದ ಮೌಂಟ್ ಅಬುನಲ್ಲಿರುವ ಶಾಂತಿವನದಲ್ಲಿ ಇಂದು ನಡೆದ ಬ್ರಹ್ಮ ಕುಮಾರಿಸ್ 80 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ.
ನಾನು ಕರಾಚಿಯಲ್ಲಿ ಹುಟ್ಟಿದರೂ ನನಗೆ ಶಿಸ್ತು, ರಾಷ್ಟ್ರಭಕ್ತಿ ಮತ್ತು ರಾಷ್ಟ್ರ ಸಮರ್ಪಣಾ ಭಾವವನ್ನು ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಡೆದಿದ್ದೇನೆ. ನಾವು ತಪ್ಪು ಕೆಲಸಗಳನ್ನು ಅಥವಾ ವಿಷಯಗಳನ್ನು ಪ್ರಚಾರ ಮಾಡಬಾರದು. ದೇಶದ ಬಗೆಗಿನ ಭಕ್ತಿ ಮತ್ತು ದೇಶಕ್ಕಾಗಿ ಸಮರ್ಪಣಾ ಭಾವವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
4 ದಿನಗಳ ಕಾಲ ನಡೆಯಲಿರುವ ಲೋಕ ಜ್ಞಾನದ ಅಂತಾರಾಷ್ಟ್ರೀಯ ಸಮ್ಮೇಳನ ಸಂಸ್ಕೃತಿ ಹಬ್ಬ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ದೇಶದ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು.
ಬ್ರಹ್ಮಕುಮಾರೀಸ್ನ ಮುಖ್ಯಸ್ಥರಾದ 101 ವರ್ಷದ ದಾದಿ ಜಾನಕಿ, ದಾದಿ ರ್ಹಿದಯಾ ಮೋಹಿನಿ ಮತ್ತಿನ್ನಿತರ ಮುಖ್ಯಸ್ಥರು ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ.
ರಾಜಸ್ಥಾನದ ಮೌಂಟ್ ಅಬುನಲ್ಲಿ ಬ್ರಹ್ಮಕುಮಾರೀಸ್ ಕೇಂದ್ರ ಕಛೇರಿಯಿದ್ದು, ಇದು 1937 ರಲ್ಲಿ ಪ್ರಾರಂಭಗೊಂಡಿತ್ತು. ವಿಶ್ವಾದ್ಯಂತ ಸುಮಾರು 8,500 ಕ್ಕೂ ಹೆಚ್ಚು ಧ್ಯಾನ ಕೇಂದ್ರಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.