ಲಖ್ನೋ : ಹಜ್ ಸಬ್ಸಿಡಿ ಪಡೆಯುವ ಅಧಿಕಾರ ಕೇವಲ ಬಡ ಮುಸ್ಲಿಮರಿಗೆ ಮಾತ್ರವಿದೆ. ಶ್ರೀಮಂತ ಮುಸ್ಲಿಮರು ಸರಕಾರದ ನೆರವು ಪಡೆದು ಹಜ್ ಯಾತ್ರೆ ಕೈಗೊಳ್ಳಬಾರದು ಎಂದು ಉತ್ತರ ಪ್ರದೇಶದ ವಕ್ಫ್ ಸಚಿವ ಮೊಹ್ಸಿನ್ ರಾಝಾ ಹೇಳಿದ್ದಾರೆ.
ಅಲ್ಲದೆ ಬಡ ಮುಸ್ಲಿಮರಿಗಷ್ಟೇ ಹಜ್ ಸಬ್ಸಿಡಿಯನ್ನು ದೊರಕಿಸಿಕೊಡುವುದಕ್ಕೆ ತನ್ನ ಪ್ರಾಮುಖ್ಯತೆ ಎಂದಿದ್ದಾರೆ.
ಸ್ವಂತ ಹಣಕಾಸು ಬಲದಿಂದ ಮೆಕ್ಕಾಗೆ ಯಾತ್ರೆ ಕೈಗೊಳ್ಳಲಾಗದವರಿಗೆ ಸರ್ಕಾರ ಹಜ್ ಸಬ್ಸಿಡಿಯನ್ನು ನೀಡುತ್ತದೆ. ಆದರೆ ಕೋಟ್ಯಾಧಿಪತಿಗಳೂ ಕೂಡಾ ಈ ನೆರವನ್ನು ಪಡೆದು ಹಜ್ ಯಾತ್ರೆ ಕೈಗೊಳ್ಳುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ನಿಯಮದಲ್ಲಿ ಬದಲಾವಣೆ ತರಲು ನಾವು ಮುಂದಾಗಿದ್ದೇವೆ ಎಂದಿದ್ದಾರೆ.
ಹಜ್ ಸಬ್ಸಿಡಿ ನೀಡುವುದರಲ್ಲಿಯೂ ಪಾರದರ್ಶಕತೆಯನ್ನು ತರಲಾಗಿಲ್ಲ. ಹಜ್ ಕಛೇರಿಗೆ ಆಗಮಿಸುವ ಕೆಲವರಿಗೆ ಸಬ್ಸಿಡಿ ಏರಿಕೆಯಾದ ಬಗ್ಗೆಯೂ ಯಾವುದೇ ಐಡಿಯಾ ಇಲ್ಲ ಎಂದಿದ್ದಾರೆ.
ಶ್ರೀಮಂತರು ಎಲ್ಪಿಜಿ ಸಬ್ಸಿಡಿ ತೊರೆಯುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಕೋಟ್ಯಾಂತರ ಭಾರತೀಯರು ಸ್ಪಂದಿಸಿದ್ದಾರೆ. ಅಂತೆಯೇ ನಾನು ಶ್ರೀಮಂತ ಮುಸ್ಲಿಮರಿಗೆ ಹಜ್ ಸಬ್ಸಿಡಿ ತೊರೆಯುವಂತೆ ಕರೆ ನೀಡುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.