ನವದೆಹಲಿ : ಬಿಎಸ್ಎಫ್ನ 51 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಂಬಾಟ್ ಆಫೀಸರ್ ಆಗಿ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ.
25 ವರ್ಷದ ತನುಶ್ರೀ ಪಾರೀಕ್ ಶನಿವಾರ ದೇಶದ ಅತೀ ದೊಡ್ಡ ಗಡಿ ಭದ್ರತಾ ಪಡೆ ಬಿಎಸ್ಎಫ್ನ ಮೊದಲ ಕಂಬಾಟ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.
ಅಲ್ಲದೆ ಗ್ವಾಲಿಯರ್ನ ಟೆಕನ್ಪುರದ ಬಿಎಸ್ಎಫ್ ಕ್ಯಾಂಪ್ನಲ್ಲಿ ನಡೆದ ೬೭ ತರಬೇತು ಅಧಿಕಾರಿಗಳ ಪಾಸಿಂಗ್ ಔಟ್ ಪೆರೇಡ್ನ ನೇತೃತ್ವವನ್ನು ಪಾರೀಕ್ ವಹಿಸಿಕೊಂಡಿದ್ದರು.
ಈ ಪೆರೇಡ್ನ್ನು ಕೇಂದ್ರ ಗೃಹಸಚಿವ ರಾಜ್ನಾಥ್ ಸಿಂಗ್ ಪರಿಶೀಲನೆ ನಡೆಸಿದರು. ಅಲ್ಲದೆ ಪಾರೀಕ್ ಸಮವಸ್ತ್ರಕ್ಕೆ ಸ್ಟಾರ್ ಅನ್ನು ಅಳವಡಿಸಿದರು.
2014 ರಲ್ಲಿ ಯುಪಿಎಸ್ಸಿ ನಡೆಸಿದ ಆಲ್ ಇಂಡಿಯಾ ಪರೀಕ್ಷೆಯಲ್ಲಿ ಪಾರೀಕ್ ಅವರು ಆಯ್ಕೆಗೊಂಡಿದ್ದರು.
ಇನ್ನು ಮುಂದೆ ಇವರು ಪಂಜಾಬ್ನ ಭಾರತ-ಪಾಕಿಸ್ಥಾನ ಗಡಿಕಾವಲು ತಂಡದ ನೇತೃತ್ವವನ್ನು ವಹಿಸಲಿದ್ದಾರೆ. ಇವರು ರಾಜಸ್ಥಾನದ ಬಿಕನೇರ್ ಮೂಲದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.