ನವದೆಹಲಿ: ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು.
ಮಾರ್ಚ್ 26 ಬಾಂಗ್ಲಾ ವಿಮೋಚನಾ ದಿನವಾಗಿದ್ದು ಈ ಹಿನ್ನಲೆಯಲ್ಲಿ ಅವರು ಬಾಂಗ್ಲಾ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳಿದರು.
ಭಗತ್ ಸಿಂಗ್,ಸುಖದೇವ್ ಮತ್ತು ರಾಜಗುರು ಇವರ ಬಲಿದಾನವನ್ನು ನೆನೆದ ಮೋದಿ, ಈ ಮೂವರು ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ್ದು ದೇಶದ ಯುವಜನತೆ ಇವರ ಅರಿವು ಪಡೆಯಬೇಕಾಗಿದೆ ಎಂದರು.
ಡಿಜಿಟಲ್ ಪೇಮೆಂಟ್ಗೆ ದೇಶದ ಜನ ಹೆಚ್ಚಿನ ಒತ್ತು ನೀಡಬೇಕು ಹಾಗೂ ನಗದು ವ್ಯವಹಾರವನ್ನು ಕನಿಷ್ಠಗೊಳಿಸಬೇಕು ಎಂದರು. ‘ನ್ಯೂ ಇಂಡಿಯಾ’ ಸರ್ಕಾರದ ಕಾರ್ಯಕ್ರಮವಲ್ಲ 125 ಕೋಟಿ ಜನರ ಕಾರ್ಯಕ್ರಮವಾಗಿದೆ ದೇಶವನ್ನು ಬದಲಿಸುವ ಕನಸನ್ನು ನನಸಾಗಿಸುವ ಯೋಜನೆಯಾಗಿದೆ ಎಂದರು.
ಸ್ವಚ್ಛತಾ ಅಭಿಯಾನದಿಂದ ದೇಶದ ಜನರಿಗೆ ಸ್ವಚತೆ ಬಗ್ಗೆ ಅರಿವು ಮೂಡಿದೆ ಈ ಅಭಿಯಾನದಿಂದ ಸ್ವಚ್ಛತೆ ಅಭ್ಯಾಸವಾಗಿ ಬದಲಾಗಿದೆ ಎಂದರು.
ಆಹಾರವನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು, ತಮಗೆ ಬೇಕಾದಷ್ಡು ಮಾತ್ರ ತಟ್ಟೆಗೆ ಹಾಕಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಆಹಾರವನ್ನು ವ್ಯರ್ಥ ಮಾಡುವುದು ಬಡವರಿಗೆ ಮಾಡುವ ಅವಮಾನ ಎಂದರು.
ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತಿದೆ. ಈ ವರ್ಷ ’ಡಿಪ್ರೆಶನ್’ ವಿಶ್ವ ಆರೋಗ್ಯ ದಿನದ ಥೀಮ್ ಆಗಿದೆ. ವಿಶ್ವದ 35 ಕೋಟಿ ಜನ ಡಿಪ್ರೆಶನ್ ಒಳಗಾಗಿದ್ದು ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಯೋಗದಿಂದ ಡಿಪ್ರೆಶನ್ ತೊಲಗಿಸಲು ಸಾಧ್ಯ ಎಂದರು.
ಈ ವರ್ಷ ಚಂಪರಾಣ ಸತ್ಯಾಗ್ರಹದ ಶತಮಾನೋತ್ಸವ ಎಂಬುದನ್ನು ಸ್ಮರಿಸಿದರು ಹಾಗೂ ಯುಗಾದಿ ಹಬ್ಬದ ಹಿನ್ನಲೆಯಾಗಿ ದೇಶದ ಜನತೆಗೆ ಶುಭಾಶಯ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.