ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮದ್ರಾಸ್ (ಐಐಟಿ-ಎಮ್)ನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 2011ರಲ್ಲಿ 90ರಿಂದ 2016ರಲ್ಲಿ 145ಕ್ಕೆ ತಲುಪಿದ್ದು, ಶೇ.61ರಷ್ಟು ಏರಿಕೆಯಾಗಿದೆ. ಇದು ಐಐಟಿ- ಮದ್ರಾಸ್ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವುದರ ಜೊತೆಗೆ ಪ್ರಚಾರವನ್ನು ಪಡೆಯುತ್ತಿರುವ ಸಂಕೇತವಾಗಿದೆ ಎನ್ನಲಾಗಿದೆ.
ಜಾಗತಿಕ ಶ್ರೇಯಾಂಕ ಸಮೀಕ್ಷೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಬೋಧಕರ ಸಂಖ್ಯೆ ಗಮನಾರ್ಹವಾಗಿದೆ ಎಂದು ತಿಳಿದು ಬಂದಿದ್ದು, ಐಐಟಿ-ಎಮ್ ಪೂರ್ಣ ಸಮಯ ಕೆಲಸ ನಿರ್ವಹಿಸುವ ಬೋಧಕ ಸಿಬ್ಬಂದಿಗಳ ನೇಮಕಾತಿ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಜೊತೆ ಸಂಶೋಧನಾ ಸಹಯೋಗ ಹೆಚ್ಚಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕ್ಯೂಎಸ್ ಶ್ರೇಯಾಂಕ, ಟೈಮ್ ಶ್ರೇಯಾಂಕ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್ಡಿ) ಶ್ರೇಯಾಂಕದಲ್ಲಿ ಐಐಟಿ-ಎಮ್ನ ಶ್ರೇಯಾಂಕ ಕ್ರಮೇಣ ಏರುತ್ತಿದೆ.
ವಿದ್ಯಾರ್ಥಿ ವಿನಿಮಯ ಪ್ರೋಗ್ರಾಂ ಎರಡು ರೀತಿ ಕೆಲಸ ಮಡುತ್ತಿದೆ. ಮೊದಲನೇಯದಾಗಿ ಭಾರತೀಯ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಒಂದು ಸೆಮಿಸ್ಟರ್ (4 ತಿಂಗಳು) ಪೂರ್ಣಗೊಳಿಸುತ್ತಾನೆ. ಅದೇ ಮಾದರಿ ವಿದೇಶಿ ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಐಐಟಿ-ಎಮ್ಗೆ ಭೇಟಿ ನೀಡಿ ಒಂದು ಸೆಮಿಸ್ಟರ್ನ ಕಲಿಯುತ್ತಾನೆ. ಎರಡನೇ ಸಾಧ್ಯತೆ ಎಂದರೆ ವಿದೇಶಿ ವಿದ್ಯಾರ್ಥಿಗಳು ಸಂಶೋಧನಾ ಸಹಯೋಗಕ್ಕಾಗಿ ಐಐಟಿ-ಎಮ್ಗೆ ಭೇಟಿ ನೀಡುವುದಾಗಿದೆ ಎಂದು ಅಂತಾರಾಷ್ಟ್ರೀಯ ಮತ್ತು ಹಳೇ ವಿದ್ಯಾರ್ಥಿಗಳ ಡೀನ್ ಆರ್. ನಾಗರಾಜನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.