ನವದೆಹಲಿ: ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ಕನ್ಯಾಕುಮಾರಿಯಿಂದ ಕೋಲ್ಕತ್ತಾಗೆ ಸಂಚಾರ ಕೈಗೊಂಡು ಬೀದಿ ಬದಿ ಮಕ್ಕಳಿಗೆ ಶಿಕ್ಷಣ ಹಾಗು ವಸತಿ ನೀಡುವ ಕೋಲ್ಕತ್ತಾ ಮೂಲದ ಚಾರಿಟಿ ‘ಫ್ಯೂಚರ್ ಹೋಪ್’ಗೆ ಹಣ ಸಂಗ್ರಹಿಸಿದ್ದಾರೆ.
ಪಟ್ರಿಕ್ ಬಡ್ಡೇಲೆ ಕಳೆದ ಅಕ್ಟೋಬರ್ನಲ್ಲಿ ಕನ್ಯಾಕುಮಾರಿಯಿಂದ ಯಾತ್ರೆ ಆರಂಭಿಸಿದ್ದು, ತಮಿಳುನಾಡು, ಆಂಧ್ರ, ಒರಿಸ್ಸಾವನ್ನು ದಾಟಿ ಕಳೆದ ಫೆಬ್ರವರಿಯಲ್ಲಿ ಕೋಲ್ಕತ್ತಾ ತಲುಪಿದ್ದಾರೆ. ತಮ್ಮ ಈ ಸುಧೀರ್ಘ ಸಂಚಾರದ ಎಲ್ಲಾ ಮಾಹಿತಿಗಳನ್ನು ಅವರು ಒಂದಿಂಚೂ ಬಿಡದಂತೆ ಫೇಸ್ಬುಕ್ ಪೇಜ್ನಲ್ಲಿ ಹಾಕಿದ್ದಾರೆ. ಭಾರತೀಯರ ದೈನಂದಿನ ಬದುಕಿನ ನೋಟಗಳನ್ನು ಅವರ ಫೋಟೋಗಳು ನೀಡುತ್ತವೆ.
ಈಗಾಗಲೇ ಅವರು ಚಾರಿಟಿಗಾಗಿ 124 ದಾನಿಗಳಿಂದ 10ಲಕ್ಷ ರೂಪಾಯಿ ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2 ಲಕ್ಷದ ಗುರಿ ಹೊಂದಿದ್ದ ಅವರು 10 ಲಕ್ಷ ಸಂಗ್ರಹಿಸಿದ್ದು ಅವರಿಗೆ ಅತೀವ ಸಂತಸ ನೀಡಿದೆ.
‘1973ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಭಾರತಕ್ಕೆ ಆಗಮಿಸಿದ್ದೆ, ಆಗ ಶುರವಾದ ಭಾರತದ ಮೇಲಿನ ಪ್ರೇಮ ಈಗಲೂ ಮುಂದುವರೆದಿದೆ. ೨೦೧೫ರಲ್ಲಿ ನಿವೃತ್ತನಾದ ಬಳಿಕ ಭಾರತದಲ್ಲಿ ಸಂಚಾರ ಮಾಡಬೇಕು ಎಂಬ ಆಸೆಯಿಟ್ಟುಕೊಂಡಿದ್ದೆ. ಅದೀಗ ನೆರವೇರಿತು’ ಎಂದು ಪಟ್ರಿಕ್ ಹೇಳುತ್ತಾರೆ.
ತನ್ನ ಯಾತ್ರೆಯ ವೇಳೆ ಅವರು ಹಲವಾರು ಪ್ರಸಿದ್ಧ ಧಾರ್ಮಿಕ, ಸಾಂಸ್ಕೃತಿಕ ತಾಣಗಳಿಗೆ ಭೇಟಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.