ಭೋಪಾಲ್: ಅಕಾಲಿಕ ವೃದ್ಧಾಪ್ಯವನ್ನು ಉಂಟುಮಾಡುವ ಪ್ರೊಗೆರಿಯಾ ಸಮಸ್ಯೆಯಿಂದ ಬಳಲುತ್ತಿರುವ 12 ವರ್ಷದ ಬಾಲಕ ಶ್ರೇಯಾಂಶ್ ಬರ್ಮಾಟೆಯ ಆಸೆಯಂತೆ ಆತನನ್ನು ಒಂದು ದಿನದ ಮಟ್ಟಿಗೆ ಮಧ್ಯಪ್ರದೇಶದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಮುಖ್ಯಸ್ಥನನ್ನಾಗಿ ಶುಕ್ರವಾರ ನೇಮಿಸಲಾಯಿತು.
ಕೆಂಪು ದೀಪವನ್ನು ಹೊಂದಿದ ವಾಹನದ ಮೂಲಕ ಈತನನ್ನು ಸಮನ್ವಯ ಭವನಕ್ಕೆ ಕರೆ ತಂದು ಬಳಿಕ ಔಪಚಾರಿಕವಾಗಿ ಮುಖ್ಯಸ್ಥ ಸ್ಥಾನವನ್ನು ಈತನಿಗೆ ಹಸ್ತಾಂತರ ಮಾಡಲಾಯಿತು. ಬಳಿಕ ಆತ ಮಕ್ಕಳ ಹಕ್ಕುಗಳ ಬಗೆಗಿನ ರಾಜ್ಯ ಮಟ್ಟದ ಪರಿಶೀಲನಾ ಸಭೆಯ ನೇತೃತ್ವ ವಹಿಸಿದ.
ಬಳಿಕ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಭಾಗವಹಿಸಿದ್ದು, ಶ್ರೇಯಾಂಶ್ ಮತ್ತು ಆತನ ರೀತಿಯ ಸಮಸ್ಯೆ ಹೊಂದಿರುವ ರಾಜ್ಯದ ಎಲ್ಲಾ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಸಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಮುಖ್ಯಸ್ಥ ರಾಘವೇಂದ್ರ ಶರ್ಮಾ ಒಂದು ದಿನ ಜಬಲ್ಪುರದಲ್ಲಿನ ಶ್ರೇಯಾಂಶ್ ಮನೆಗೆ ತೆರಳಿ ಆತನನ್ನು ಬೇಟಿಯಾದರು. ಈ ವೇಳೆ ಆತ ಅವರಂತೆ ತನಗೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಮುಖ್ಯಸ್ಥನಾಗುವ ಆಸೆಯಿದೆ ಎಂಬುದಾಗಿ ಹೇಳಿಕೊಂಡಿದ್ದ. ಹೀಗಾಗೀ ಶರ್ಮಾ ಆತನ ಆಸೆಯನ್ನು ಈಡೇರಿಸಲು ಮುಂದಾದರು.
ಪ್ರೊಗಾರಿಯೋ ಎಳೆ ಮಕ್ಕಳನ್ನು ವೃದ್ಧರಂತೆ ಮಾಡುವ ಗಂಭೀರ ಕಾಯಿಲೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.