ನವದೆಹಲಿ: ತನ್ನ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ನನ್ನು ಏರ್ ಇಂಡಿಯಾ ಕಪ್ಪುಪಟ್ಟಿಗೆ ಸೇರಿಸಿದ್ದು, ಆತ ನವದೆಹಲಿಯಿಂದ ಪುಣೆಗೆ ಪ್ರಯಾಣಿಸಲು ಕಾಯ್ದಿರಿಸಿದ್ದ ಟಿಕೆಟನ್ನು ರದ್ದುಗೊಳಿಸಿದೆ.
ಏರ್ ಇಂಡಿಯಾ ಸಿಬ್ಬಂದಿಗೆ 23 ಬಾರಿ ಚಪ್ಪಲಿಯಲ್ಲಿ ಬಾರಿಸಿ ಆತನನ್ನು ಏರ್ಕ್ರಾಫ್ಟ್ನಿಂದ ಹೊರಹಾಕಲು ಪ್ರಯತ್ನಿಸಿದ್ದನ್ನು ಗಾಯಕ್ವಾಡ್ ರಾಜಾರೋಷವಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ತನ್ನ ದುವರ್ತನೆಗೆ ಕ್ಷಮೆಯಾಚನೆ ಮಾಡಲೂ ಆತ ನಿರಾಕರಿಸಿದ್ದಾನೆ.
ಇದೀಗ ಆತ ಶುಕ್ರವಾರಕ್ಕೆ ದೆಹಲಿಯಿಂದ ಪುಣೆಗೆ ಆಗಮಿಸಲು ನಿಗದಿಪಡಿಸಿದ್ದ ಟಿಕೆಟ್ನ್ನು ಏರ್ಇಂಡಿಯಾ ರದ್ದು ಮಾಡಿದೆ.
ನನ್ನ ಬಳಿ ಟಿಕೆಟ್ ಇದೆ, ಸಂಜೆ ಫ್ಲೈಟ್ಗೆ ನಾನು ಹೊರಡುತ್ತೇನೆ, ಅದು ಹೇಗೆ ನನ್ನನ್ನು ತಡೆಯುತ್ತಾರೋ ನಾನು ನೋಡುತ್ತೇನೆ ಎಂದು ಈತ ಸಾವಾಲು ಹಾಕಿದ್ದಾನೆ. ಅಲ್ಲದೇ ಘಟನೆಗೆ ಏರ್ ಇಂಡಿಯಾ ಸಿಬ್ಬಂದಿಯನ್ನೇ ದೂಷಿಸಿದ್ದಾನೆ.
ಎಷ್ಟು ಕಾಲದವರಗೆ ಈತನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂಬುದನ್ನು ಇನ್ನೂ ಏರ್ ಇಂಡಿಯಾ ಸ್ಪಷ್ಟಪಡಿಸಿಲ್ಲ. ಕಪ್ಪುಪಟ್ಟಿಗೆ ಸೇರಿರುವುದರಿಂದ ಇನ್ನು ಆತನಿಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸುವ ಅವಕಾಶವಿಲ್ಲ