ಮುಂಬಯಿ: ತನ್ನ 16ನೇ ವಯಸ್ಸಿಗೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದ ಅಯೇಷಾ ಅಜೀಝ್ ಇದೀಗ ಪ್ರಯಾಣಿಕ ವಿಮಾನವನ್ನು ಹಾರಿಸಲು ಸಜ್ಜಾಗಿದ್ದಾಳೆ.
2011ರಲ್ಲಿ ಈಕೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದು, ಇದೀಗ ಆಕೆಗೆ 21 ವರ್ಷ ತುಂಬಿದೆ. ಹೀಗಾಗಿ ಪ್ರಯಾಣಿಕ ವಿಮಾನ ಹಾರಾಟದ ಲೈಸೆನ್ಸ್ ಪಡೆದುಕೊಂಡಿದ್ದಾಳೆ.
ವರ್ಲಿ ಬ್ಯುಸಿನೆಸ್ಮ್ಯಾನ್ ಅಬ್ದುಲ್ ಅಜೀಝ್ ಅವರ ಪುತ್ರಿ ಆಗಿರುವ ಆಯೇಷಾ ಬಾಲ್ಯದಲ್ಲೇ ಹಾರುವ ಕನಸು ಕಂಡಿದ್ದವಳು. ತಾಯಿಯೊಂದಿಗೆ ತಮ್ಮ ಮೂಲ ಊರು ಕಾಶ್ಮೀರಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಪೈಲೆಟ್ ಆಗುವ ಆಕೆಯ ಕನಸು ಗರಿಗೆದರುತ್ತಿದ್ದವು. ಆಕೆಯ ಕನಸಿಗೆ ನೀರೆರೆದು ಪೋಷಿಸಿದ ತಂದೆ ವಿಮಾನಯಾನ ತರಬೇತಿಯನ್ನು ಕೊಡಿಸಿದರು.
ಬಾಂಬೆ ಫ್ಲೈಯಿಂಗ್ ಕ್ಲಬ್ನಲ್ಲಿ ಆವಿಯೇಷನ್ ತರಬೇತಿ ಪೂರ್ಣಗೊಳಿಸಿರುವ ಆಕೆ ಈಗಾಗಲೇ ಸಿಂಗಲ್ ಎಂಜಿನ್ ಏರ್ಕ್ರಾಫ್ಟ್ನ್ನು 200 ಗಂಟೆಗಳ ಕಾಲ ಹಾರಿಸಿದ್ದಾಳೆ.
ಮುಸ್ಲಿಂ ಯುವತಿ ಹಿಜಬ್ ಇಲ್ಲದೆ ವಿಮಾನ ಓಡಿಸುತ್ತಾಳೆ ಎಂಬುದು ಕೆಲವರ ಕೊಂಕು ಮಾತಿಗೆ ಕಾರಣವಾಗಿತ್ತು, ಆದರೆ ಬಹಳಷ್ಟು ಮಂದಿ ಈಕೆಗೆ ಬೆಂಬಲವಾಗಿ ನಿಂತಿದ್ದಾರೆ.
‘ಮಹಿಳೆಯರು ತಮ್ಮ ಕಂಫರ್ಟ್ ಝೋನ್ನಿಂದ ಹೊರಬಂದು, ಸವಾಲುಗಳನ್ನು ಎದುರಿಸಬೇಕು. ವೈದ್ಯೆ, ಶಿಕ್ಷಕಿ, ಗೃಹಿಣಿ ಮಾತ್ರವಲ್ಲದೇ ಸವಾಲುಗಳನ್ನು ಹೊಂದಿರುವ ಕಾರ್ಯಕ್ಷೇತ್ರಗಳನ್ನೂ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಆಯೇಷಾ ಎಲ್ಲಾ ಮಹಿಳೆಯರಿಗೆ ಕಿವಿಮಾತು ಹೇಳುತ್ತಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.