ನವದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಹಾಗೂ ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಗೊಂದಲದ ಸ್ಥಿತಿಯಲ್ಲಿದೆ, ರಾಹುಲ್ ಅವರ ಹಿಟ್ ಆಂಡ್ ರನ್ ಪಾಲಿಟಿಕ್ಸ್ ಕೆಲಸ ಮಾಡೋದಿಲ್ಲ ಎನ್ನುವ ಮೂಲಕ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
‘ಸೋನಿಯಾ ಮುಂದಾಳತ್ವ ಇರುವವರೆಗೂ ನಾನು ಕಾಂಗ್ರೆಸ್ನಲ್ಲಿ ಚೆನ್ನಾಗಿಯೇ ಇದ್ದೆ. ಕಳೆದ ೩ ವರ್ಷದಿಂದ ನನ್ನಂತಹ ನಾಯಕರನ್ನು ಮೂಲೆಗುಂಪು ಮಾಡಲಾಯಿತು. ಸ್ಪರ್ಧೆಗಳಿಗೆ ಮಹತ್ವ ನೀಡದ ಕುಟುಂಬ ರಾಜಕಾರಣವೇ ಕಾಂಗ್ರೆಸ್ಗೆ ಮುಳುವಾಗಿದೆ’ ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಎಂಬುದು ಗಂಭೀರ ವ್ಯವಹಾರ, ಇದು ಪಾರ್ಟ್ ಟೈಮ್ ಜಾಬ್ ಅಥವಾ ಹಿಟ್ ಆಂಡ್ ರನ್ ಕಾರ್ಯವಲ್ಲ ಎಂದು ರಾಹುಲ್ ಗಾಂಧಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.