×
Home About Us Advertise With s Contact Us

ಧೂಮಪಾನ ನಿಶೇಧ ಕಾಯ್ದೆ ಜಾರಿ

ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ತಂಬಾಕು ಕಾಯ್ದೆ-2003ರನ್ವಯ ಧೂಮಪಾನ ಮಾಡುವುದರಿಂದ ಪರಿಣಾಮ ಬೀರಿ, ಶ್ವಾಸಕೋಶ ಕ್ಯಾನ್ಸರ್ ಹಾಗೂ ಮಕ್ಕಳಲ್ಲಿ ಬೇಗನೇ ಕ್ಯಾನ್ಸರ್ ಕಾಯಿಲೆ ಹರಡುತ್ತಿರುವುದರಿಂದ ಅದನ್ನು ತಡೆಗಟ್ಟುವ ಸಲುವಾಗಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

26KV--TBK

ಧೂಮಪಾನ ಉತ್ಪನ್ನಗಳನ್ನು ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುವುದು ಮತ್ತು ಧೂಮಪಾನ ಮಾಡುವುದನ್ನು ನಿರ್ಬಂಧಿಸುವ ಸಲುವಾಗಿ ಈ ಕಾಯ್ದೆ ಜಾರಿಗೆ ಬಂದಿರುವುದರಿಂದ ಕಡ್ಡಾಯವಾಗಿ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಮತ್ತು ಧೂಮಪಾನದಿಂದ ಉಂಟಾಗುವಂತಹ ಕ್ಯಾನ್ಸರ್ ಬಗ್ಗೆ ಹಾಗೂ ನಿಷೇಧದ ಬಗ್ಗೆ ಲಗತ್ತಿಸಿದ ನಾಮಫಲಕವನ್ನು ಕಡ್ಡಾಯವಾಗಿ ಮೂರು ದಿನಗಳೊಳಗೆ ಅಂಗಡಿಯ ಮುಂದೆ ಅಳವಡಿಸಲಾಗುವುದು.

ಅಲ್ಲದೆ ಅಂಗಡಿ, ಹೊಟೇಲ್, ಬಾರ್ ಇನ್ನಿತರ ಯಾವುದೇ ಸ್ಥಳಗಳಲ್ಲಿ ಧೂಮಪಾನ ಉತ್ಪನ್ನಗಳನ್ನು ಮಾರಾಟ ಮಾಡುವವರ ಮತ್ತು ಧೂಮಪಾನ ಮಾಡುವ ಸ್ಥಳದ (ಹೊಟೇಲ್, ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್) ಮಾಲಕರಿಗೆ ತಂಬಾಕು ಕಾಯ್ದೆಯನ್ವಯ ಸೆಕ್ಷನ್ 4ಮತ್ತು 6 ರಂತೆ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಪ್ರತಿಯೊಂದು ಅಂಗಡಿ, ಹೊಟೇಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಜಾಗೃತಿ: ಇದೀಗ ನಗರದೆಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ, ಪರಿಸರ ಅಭಿಯಂತರ ಮದನ್ ಕೆ., ಸಿಬ್ಬಂದಿಗಳಾದ ರವಿ ಪೂಜಾರಿ, ಚಂದ್ರಶೇಖರ, ಶಿವಾನಂದ ಪಕ್ಷಪ್ಪ ಪಟ್ಟಿಹಾಳ ಮತ್ತು ಜಗನ್ನಾಥ ಶೆಟ್ಟಿ ತಂಡದಿಂದ ಜಾಗೃತಿ ಮೂಡಿಸಲಾಗುತ್ತಿದೆ.

 

Recent News

Back To Top
error: Content is protected !!