ನವದೆಹಲಿ: ಭಾರತೀಯ ಸೇನೆಯ ಕ್ಷಿಪ್ರ ಶಸ್ತ್ರಾಸ್ತ್ರ ಸ್ವಾಧೀನದ ನಡುವೆಯೂ, ಶಸ್ತ್ರಾಸ್ತ್ರ ಪಡೆಗಳು ಇಂದಿನ ವಿಸ್ತೃತ ಪರಿಸರದಲ್ಲಿ ದೇಶದ ಗಡಿಯುದ್ದಕ್ಕೂ ಸಾಂಪ್ರದಾಯಿಕ ಸಮರಕ್ಕೆ ಸಿದ್ಧರಿರಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಸರ್ಜಿಕಲ್ ದಾಳಿ ನಂತರ ರಕ್ಷಣಾ ಸಚಿವಾಲಯ ಕ್ಷಿಪ್ರ ಗತಿಯಲ್ಲಿ ರಕ್ಷಣಾ ಸ್ವಾಧೀನದಲ್ಲಿ ತೊಡಗಿಕೊಂಡಿದೆ.
ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪ್ರಸ್ತುತ ಪರಿಸ್ಥಿಯಲ್ಲಿ ಸಶಸ್ತ್ರ ಪಡೆಗಳು ತಂತ್ರಜ್ಞಾನವನ್ನು ಬಳಸುತ್ತಿದ್ದು, ಅದು ಇಂದಿನ ಬದಲಾಗುತ್ತಿರುವ ಅರ್ಥವ್ಯವಸ್ಥೆಯ ಗತಿಯಲ್ಲೇ ಸಾಗಲಿದೆ. ಆದರೆ ಅದಕ್ಕೆ ಸರಿಯಾದ ತಂತ್ರಜ್ಞಾನ, ಉಪಕರಣಗಳನ್ನು ಗುರುತಿಸಿ ಸೇನೆಗೆ ಸೇರ್ಪಡೆಗೊಳಿಸುವುದು ಮುಖ್ಯ ಎಂದು ರಾವತ್ ಹೇಳಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಸೇನೆ ಅದೇ ಗತಿಯಲ್ಲಿ ಸಾಗಬೇಕಿದ್ದು, ಸೇನೆಯ ಎಲ್ಲ ವ್ಯವಸ್ಥೆ ಡಿಜಿಟಲ್ ಆಗಿದೆಯೇ ಎಂದು ಖಚಿತಪಡಿಸಬೇಕಿದೆ. ಇದೇ ವೇಳೆ ಗಡಿಯಲ್ಲಿ ಯಾವುದೇ ಸಂದರ್ಭದಲ್ಲಿ ಯುದ್ಧ ನಡೆಯಬಹುದಾಗಿದ್ದು, ಅಗಕ್ಕಾಗಿ ಸೇನೆ ಸೇರ್ಪಡೆಗೊಳ್ಳುವ ತಂತ್ರಜ್ಞಾನವನ್ನು ಹಗುರ ಮತ್ತು ಭದ್ರವಾಗಿರಬೇಕು ಎಂದು ಅವರು ಒತ್ತು ನೀಡದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.