ಧಾರವಾಡ : ಧಾರವಾಡದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಭಗತಸಿಂಗ್, ಸುಖದೇವ್, ರಾಜಗುರು ಅವರ ಬಲಿದಾನ ದಿವಸ್ ಅಂಗವಾಗಿ ಪಂಜಿನ ಮೆರವಣಿಗೆ ನಡೆಸಲಾಯಿತು. ವಿದ್ಯಾಗಿರಿ ಠಾಣೆಯ ಪೋಲಿಸ್ ಅಧಿಕಾರಿಗಳಾದ ಹೊಸಪೇಟೆಯವರು ಮತ್ತು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ದೇಶಭಕ್ತರು ಹುತಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.
ಧಾರವಾಡದ ಮಾಳಮಡ್ಡಿಯ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಮಾರ್ಚ್ 23 ರಂದು ಬಲಿದಾನ್ ದಿವಸದ ಪ್ರಯುಕ್ತ ಪಂಜಿನ ಮೆರವಣಿಗೆಯನ್ನು ಗುರುವಾರ ಸಂಜೆ 7 ಕ್ಕೆ ಪಂಜಿನ ಮೆರವಣಿಗೆಯು ವನವಾಸಿ ಶ್ರೀ ರಾಮಮಂದಿರದಿಂದ ಕಾರ್ಗಿಲ್ ಸ್ಥೂಪದವರೆಗೆ ಸಾಗಿ ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು.
ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಆದ ಶ್ರೀ ಹೊಸಪೇಟೆಯವರು ಕ್ರಾಂತಿಕಾರಿಗಳ ಬಲಿದಾನವನ್ನು ಸ್ಮರಿಸಿದರು ಮತ್ತು ಕ್ರಾಂತಿ ಚಿರಾಯುವಾಗಿರಲಿ ಎಂದರಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹುತಾತ್ಮರಾದ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಅವರ ಬಲಿದಾನವನ್ನು ನೆನಪಿಸಿ ಎಲ್ಲರಲ್ಲೂ ರಾಷ್ಟ್ರಭಕ್ತಿಯ ಕಲ್ಪನೆಯನ್ನರಳಿಸಿದರು.
ಪಂಜಿನ ಮೆರವಣಿಗೆಯಲ್ಲಿ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.