ನವದೆಹಲಿ: ಭಾರತ ಸರ್ಕಾರ ಅಮೇರಿಕಾದೊಂದಿಗೆ H-1B ವಿಸಾ ಕುರಿತು ಮಾತುಕತೆ ನಡೆಸುತ್ತಿದ್ದು, ಸದ್ಯ H-1B ವೀಸಾ ನಿರ್ಬಂಧದ ಬಗ್ಗೆ ಅಥವಾ ಅಮೇರಿಕಾದಲ್ಲಿ ಭಾರತೀಯ ಐಟಿ ಉದ್ಯಮಿಗಳ ಉದ್ಯೋಗ ಭದ್ರತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿಸಿದ್ದಾರೆ.
ಪ್ರಸ್ತುತ H-1B ವೀಸಾ ನಿರ್ಬಂಧಗಳ ಬಗ್ಗೆ ಅಮೇರಿಕಾ ಕಾಂಗ್ರೆಸ್ನಲ್ಲಿ 4 ಮಸೂದೆಗಳಿವೆ. ಈ ವಿಚಾರವಾಗಿ ಅಮೇರಿಕಾ ಜೊತೆ ಉನ್ನತ ಮಟ್ಟದ ಮಾತುಕತೆಯಲ್ಲಿ ತೊಡಗಿಕೊಂಡಿದ್ದೇವೆ. H-1B ವೀಸಾ ನಿರ್ಬಂಧ ಮಸೂದೆ ಜಾರಿಗೆ ತರದಂತೆ ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ. ಹಾಗಾಗಿ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಅವರು ರಾಜ್ಯಸಭೆಗೆ ತಿಳಿದ್ದಾರೆ.
ಭಾರತೀಯ ವೃತ್ತಿಪರರ ಪತ್ನಿಯರಿಗೆ ನೀಡಲಾಗುವ ವೀಸಾ ಸೌಲಭ್ಯ ವಿಸ್ತರಣೆಯನ್ನು ಅಮೇರಿಕಾ ಹಿಂಪಡೆದಿಲ್ಲ ಎಂದು ಈ ವೇಳೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ವಲಸಿಗರಿಗೆ ಕುರಿತಂತೆ ಅಮೇರಿಕಾ ಅಧಿಕಾರಿಗಳು 271 ಮಂದಿಯ ಪಟ್ಟಿಯನ್ನು ನೀಡಿದ್ದು, ಅವರನ್ನು ಗಡೀಪಾರು ಮಾಡಲು ಮುಂದಾಗಿದೆ. ಈ 271 ಮಂದಿಯ ಪೂರ್ಣ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ. ಅವರ ಪೂರ್ವಚರಿತ್ರೆಯನ್ನು ಪರಿಶೀಲಿಸಿ, ಅವರು ಭಾರತೀಯ ನಾಗರಿಕರು ಎಂದು ಖಚಿತವಾದಲ್ಲಿ ಅವರು ಭಾರತಕ್ಕೆ ಮರಳಲು ಪ್ರಯಾಣ ದಾಖಲೆಗಳನ್ನು ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.