ನವದೆಹಲಿ: ಭವಿಷ್ಯದಲ್ಲಿ ಆಧಾರ್ ಕಾರ್ಡ್ ಒಂದೆ ಏಕೈಕ ಗುರುತಿನ ಚೀಟಿಯಾಗುವ ಸಾಧ್ಯತೆ ಇದೆ ಎಂಬುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಪಾನ್ಕಾರ್ಡ್, ವೋಟರ್ ಐಡಿ ಮತ್ತು ರೇಶನ್ ಕಾರ್ಡ್ಗಳನ್ನು ಆಧಾರ್ ರಿಪ್ಲೇಸ್ ಮಾಡಬಹುದು ಎಂಬುದಾಗಿ ಲೋಕಸಭೆಯಲ್ಲಿ ಹಣಕಾಸು ಮಸೂದೆ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಜೇಟ್ಲಿ ಹೇಳಿದ್ದಾರೆ.
ಟ್ಯಾಕ್ಸ್ ರಿಟರ್ನ್ ಪಾವತಿಗೆ ಆಧಾರನ್ನು ಕಡ್ಡಾಯಗೊಳಿಸಿರುವ ಕೇಂದ್ರ ನಿರ್ಧಾರವನ್ನು ಖಂಡಿಸಿ ಪ್ರತಿಪಕ್ಷಗಳ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಧಾರ್ ಏಕೈಕ ಗುರುತಿನ ಚೀಟಿಯಾಗುವ ಕಾಲ ಮುಂದೆ ಬರಬಹುದು’ ಎಂದಿದ್ದಾರೆ.
ನೀವು ಆಧಾರನ್ನು ಜನರ ಮೇಲೆ ಹೇರುತ್ತಿದ್ದೀರಿ ಎಂಬ ಪ್ರಶ್ನೆಗೂ ಹೌದು ಎಂಬ ಉತ್ತರವನ್ನು ಜೇಟ್ಲಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.