ನವದೆಹಲಿ: ಅಯೋಧ್ಯಾ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾದಕ್ಕೆ ಅಂತ್ಯಹಾಡುವ ಸಲುವಾಗಿ ನ್ಯಾಯಾಧೀಶರುಗಳನ್ನು ನೇಮಕಗೊಳಿಸಿ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
ಅಯೋಧ್ಯಾ ವಿವಾದದ ಶೀಘ್ರ ಇತ್ಯರ್ಥವನ್ನು ಕೋರಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸುಪ್ರೀಂಗೆ ಪತ್ರ ಬರೆದಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಪಕ್ಷಗಳು ಒಂದೆಡೆ ಕೂತು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸುವುದು ಒಳಿತು ಎಂದಿತ್ತು.
ಅಲ್ಲದೇ ಈ ಬಗ್ಗೆ ಪಕ್ಷಗಳ ನಿಲುವನ್ನು ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸ್ವಾಮಿಗೆ ಸೂಚಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ‘ನಾನು ಎಲ್ಲಾ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದೇನೆ, ಆದರೆ ಯಾವ ಪಕ್ಷವೂ ಇದಕ್ಕೆ ಒಪ್ಪಿಲ್ಲ. ಎರಡು ಪಕ್ಷಗಳ ನಡುವೆ ಒಂದು ವೇಳೆ ದ್ವಿಪಕ್ಷೀಯ ಮಾತುಕತೆ ಏರ್ಪಟ್ಟರೆ ಹಿಂದೂ ಹಿತಾಸಕ್ತಿ ಹೊಂದಿದ ಆರೋಪ ಎದುರಿಸುವ ಭಯ ಪಕ್ಷಗಳಿಗಿದೆ. ಹೀಗಾಗಿ ನ್ಯಾಯಾಧೀಶರೆ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಿಕೊಳ್ಳಬೇಕಿದೆ’ ಎಂದಿದ್ದಾರೆ.
ಅಲ್ಲದೇ ಮಾ.31ರಂದು ಸುಪ್ರೀಂ ನ್ಯಾಯಾಧೀಶರ ನೇಮಕದ ಬಗ್ಗೆ ನಿರ್ಧಾರ ತಿಳಿಸಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.
ಜಡ್ಜ್ ನೇಮಕಗೊಂಡರೆ ವಿವಾದ ಬೇಗ ಇತ್ಯರ್ಥಗೊಳ್ಳಬಹುದು, ಇಲ್ಲವಾದರೆ ವಿಚಾರಣೆ ಇನ್ನೂ ಸಾಕಷ್ಟು ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.