ನವದೆಹಲಿ: ಎಚ್ಐವಿ-ಏಡ್ಸ್ ಪೀಡಿತರಿಗೆ ಚಿಕಿತ್ಸೆ ಪಡೆಯುವಲ್ಲಿ, ಶಿಕ್ಷಣಸಂಸ್ಥೆಗಳ ಎಡ್ಮಿಷನ್ ಪಡೆಯುವಲ್ಲಿ, ಉದ್ಯೋಗ ಪಡೆಯುವಲ್ಲಿ ಸಮಾನತೆಯನ್ನು ನೀಡುವ ಎಚ್ಐವಿ ಮತ್ತು ಏಡ್ಸ್ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದೆ.
ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಧ್ವನಿ ಮತದ ಮೂಲಕ ಮೇಲ್ಮನೆಯಲ್ಲಿ ಈ ಮಹತ್ವದ ಮಸೂದೆಯನ್ನು ಅನುಮೋದನೆಗೊಳಿಸಿದರು. ಕಳೆದ 3 ವರ್ಷದಿಂದ ಈ ಮಸೂದೆ ಅನುಮೋದನೆಗಾಗಿ ಕಾಯುತ್ತಿತ್ತು.
ಎಲ್ಲೂ ಎಚ್ಐವಿ ಪೀಡಿತರ ಬಗ್ಗೆ ತಾರತಮ್ಯದ ಧೋರಣೆ ಇರಬಾರದು, ಅವರಿಗೆ ಚಿಕಿತ್ಸೆ ನೀಡಲು ಯಾರೂ ನಿರಾಕರಿಸದಂತೆ ಮತ್ತು ಅವರ ಮೆಡಿಕಲ್ ರಿಪೋರ್ಟ್ ಬಹಿರಂಗಗೊಳ್ಳದಂತೆ ಈ ಮಸೂದೆ ತಡೆಯಲಿದೆ. ತಪ್ಪಿತಸ್ಥರ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ದಂಡವನ್ನೂ ವಿಧಿಸಲು ಈ ಮಸೂದೆಯಡಿ ಅನುಮತಿ ಇದೆ.
ಪ್ರಸ್ತುತ ಭಾರತದಲ್ಲಿ 2.39 ಮಿಲಿಯನ್ ಜನ ಎಚ್ಐವಿ/ಏಡ್ಸ್ನಿಂದ ಬಳಲುತ್ತಿದ್ದಾರೆ. ಸೌತ್ ಆಫ್ರಿಕಾ ಮತ್ತು ನೈಜೀರಿಯಾದ ಬಳಿಕ ಭಾರತ 3ನೇ ಸ್ಥಾನದಲ್ಲಿದೆ.
ಮಹಿಳಾ ಲೈಂಗಿಕ ಕಾರ್ಯಕರ್ತೆಯರು, ಸಲಿಂಗಿಗಳು ಮತ್ತು ಇಂಜೆಕ್ಷನ್ ಮೂಲಕ ಮಾದಕ ದ್ರವ್ಯ ಸೇವಿಸುವವರು ಎಚ್ಐವಿ ತಗಲುವ ಹೆಚ್ಚಿನ ಅಪಾಯದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.