ನವದೆಹಲಿ: ಸೌದಿ ಕಂಪನಿಯೊಂದರ ಸೆರೆಯಲ್ಲಿರುವ ೨೯ ತೆಲಂಗಾಣ ಮೂಲದ ಕಾರ್ಮಿಕರ ರಕ್ಷಣೆಗೆ ಬೇಕಾದ ಕ್ರಮಕೈಗೊಳ್ಳುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿಯಲ್ಲಿನ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್ ಅವರಿಗೆ ಸೂಚಿಸಿದ್ದಾರೆ.
ತೆಲಂಗಾಣದ ಐಟಿ ಮತ್ತು ಎನ್ಆರ್ಐ ವ್ಯವಹಾರ ಸಚಿವ ಕೆ.ಟಿ.ರಾಮ ರಾವ್ ಅವರು ಸುಷ್ಮಾ ಅವರನ್ನು ಭೇಟಿಯಾಗಿ ಕಾರ್ಮಿಕರ ರಕ್ಷಣೆಗೆ ಧಾವಿಸುವಂತೆ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ತುರ್ತು ಸ್ಪಂದನೆ ನೀಡಿರುವ ಸುಷ್ಮಾ, ಜಾವೇದ್ ಅವರಿಗೆ ಕಾರ್ಮಿಕರ ಬಿಡುಗಡೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದಾರೆ.
ಟ್ವಿಟ್ ಮಾಡಿರುವ ಅವರು, ‘ಪ್ಲೀಸ್ ಜಾವೆದ್ ಭಾರತೀಯ ಕಾರ್ಮಿಕರಿಗೆ ಸಹಾಯ ಮಾಡಿ ಮತ್ತು ನನಗೆ ಹಾಗೂ ಕೆ.ಟಿ.ರಾಮ ರಾವ್ ಅವರಿಗೆ ವರದಿ ಕಳುಹಿಸಿ’ ಎಂದಿದ್ದಾರೆ.
ಅಲ್-ಹಜ್ರಿ ಎಂಬ ಕಂಪನಿಯಲ್ಲಿ ದುಡಿಯುತ್ತಿದ್ದ 29 ಮಂದಿಯನ್ನು ಸೆರೆಯಲ್ಲಿ ಇರಿಸಲಾಗಿದ್ದು, ಅವರಿಗೆ ಆಹಾರ, ನೀರು, ಔಷಧಿಗಳನ್ನು ಸರಿಯಾಗಿ ನೀಡಲಾಗುತ್ತಿಲ್ಲ ಎನ್ನಲಾಗಿದೆ.
ತಮ್ಮ ಊರುಗಳಿಗೆ ಹೋಗಲು ರಜಾ ಕೇಳಿದ್ದ ಕಾರ್ಮಿಕರ ಬಳಿ 50 ಸಾವಿರ ಡಾಲರ್ಗೆ ಬೇಡಿಕೆಯಿಟ್ಟಿದ್ದ ಕಂಪನಿ, ಅವರ ಪ್ರಯಾಣ ದರವನ್ನೂ ನೀಡಲು ನಿರಾಕರಿಸಿತ್ತು ಎನ್ನಲಾಗಿದೆ.
ಈ ವಿಷಯವನ್ನು ಸೌದಿ ಸರ್ಕಾರದೊಂದಿಗೆ ಪ್ರಸ್ತಾಪ ಮಾಡುವಂತೆ ಕೆ.ಟಿ.ರಾಮ ರಾವ್ ಅವರು ಸುಷ್ಮಾ ಸ್ವರಾಜ್ಗೆ ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.