ಗೋರಖ್ಪುರ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಅವರನ್ನು ಪ್ರಬಲ ಹಿಂದೂತ್ವ ಪ್ರತಿಪಾದಕ ಎಂಬಂತೆ ಬಿಂಬಿಸಲಾಗುತ್ತದೆ, ಆದರೆ ಅವರ ನೇತೃತ್ವದಲ್ಲಿನ ದೇಗುಲದ ವಾತಾವರಣ ಮಾತ್ರ ಅವರ ವ್ಯಕ್ತಿತ್ವವನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸುತ್ತಿದೆ.
ಕಳೆದ 35 ವರ್ಷದಿಂದ ಗೋರಖ್ನಾಥ ದೇಗುಲದ ಎಲ್ಲಾ ನಿರ್ಮಾಣ ಕಾರ್ಯಗಳ ಉಸ್ತುವಾರಿಯನ್ನು ಒಬ್ಬ ಮುಸ್ಲಿಂ ನೋಡಿಕೊಳ್ಳುತ್ತಿದ್ದಾನೆ, ಮಾತ್ರವಲ್ಲ ದೇಗುಲ ಖರ್ಚುವೆಚ್ಚಗಳ ಅಕೌಂಟ್ನ್ನೂ ನಿರ್ವಹಿಸುತ್ತಿದ್ದಾನೆ. ಆತನ ಹೆಸರು ಯಾಸೀನ್ ಅನ್ಸಾರಿ.
‘ಛೋಟಾ ಮಹರಾಜ್(ಯೋಗಿ) ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಇಲ್ಲಿಗೆ ಬಂದಾಗ ಎಲ್ಲಾ ಮಾಹಿತಿಗಳನ್ನೂ ಕೇಳಿ ಪಡೆಯುತ್ತಾರೆ. ಅಡುಗೆ ಕೋಣೆ ಸೇರಿದಂತೆ ಅವರ ವಾಸಸ್ಥಳದ ಪ್ರತಿ ಜಾಗಕ್ಕೂ ಓಡಾಡುವ ಸ್ವತಂತ್ರವನ್ನು ನನಗೆ ನೀಡಿದ್ದಾರೆ, ಅವರೊಂದಿಗೆ ಕೂತು ನಾನು ಊಟವನ್ನೂ ಮಾಡುತ್ತೇನೆ’ ಎಂದು ಅನ್ಸಾರಿ ಹೇಳುತ್ತಾರೆ.
‘ಧರ್ಮ, ಜಾತಿಯನ್ನು ನೋಡದೆ ಅವರು ಎಲ್ಲರಿಗೂ ಸಹಾಯ ಮಾಡುವುದನ್ನು ನಾನು ನೋಡಿದ್ದೇನೆ, ನನ್ನ ಕುಟುಂಬದ ಸಮಾರಂಬಗಳಿಗೂ ಅವರು ಆಗಮಿಸಿದ್ದಾರೆ. ದೇಗುಲದ ಬಳಿ ನನಗೆ ಅಂಗಡಿಯಿದೆ. ಅವರ ಕಡೆಯಿಂದ ನನಗೆ ಯಾವುದೇ ಅಗೌರವ, ತಾರತಮ್ಯವಾಗಿಲ್ಲ, ಅವರೊಬ್ಬ ನಿಜವಾದ ಸಂತ’ ಎನ್ನುತ್ತಾರೆ.
ನನ್ನ ದೊಡ್ಡಪ್ಪ, ನನ್ನ ಅತ್ತೆ ಈ ದೇಗುಲದ ಅಡುಗೆ ಕೋಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು, ನನ್ನ ಮಾವ ಇಲ್ಲಿನ ಗಾರ್ಡನರ್ ಆಗಿದ್ದರು. ನಾನು ಕ್ಯಾಶಿಯರ್ ಆಗಿ, ನಿರ್ಮಾಣ ಉಸ್ತುವಾರಿಯಾಗಿ ಕಾರ್ಯ ಮಾಡುತ್ತಿದ್ದೇನೆ ಎಂದಿದ್ದಾರೆ.
ದೇಗುಲದ ಆವರಣದಲ್ಲಿ ಬಳೆಗಳ ಅಂಗಡಿಯಿಟ್ಟಿರುವ ಮೊಹಮ್ಮದ್ ಮೊತಖ್ವಿ ಅವರು ಕೂಡ ಯೋಗಿಯವರನ್ನು ಶ್ಲಾಘಿಸಿದ್ದು, ದೇಗುಲದೊಳಕ್ಕೆ ಹಲವಾರು ಮುಸ್ಲಿಂ ಕುಟುಂಬಗಳು ನಿರ್ಭೀತಿಯಿಂದ ಜೀವನೋಪಾಯ ಕಾಯಕವನ್ನು ಮಾಡುತ್ತಿದೆ ಎಂದಿದ್ದಾರೆ.
ಈ ದೇಗುಲದ ಗೋಶಾಲೆಯ ಉಸ್ತುವಾರಿಯನ್ನೂ ಒಬ್ಬ ಮುಸ್ಲಿಂ ನೋಡಿಕೊಳ್ಳುತ್ತಿದ್ದಾರೆ. ಅವರೊಂದಿಗಿನ ಯೋಗಿ ಬಾಂಧವ್ಯದ ಬಗ್ಗೆ ಹಲವಾರು ವರದಿಗಳು ಬಂದಿರುವುದನ್ನು ನಾವು ನೋಡಿದ್ದೇವೆ.
ಒಟ್ಟಿನಲ್ಲಿ ಹರಿತ ಮಾತುಗಳಿಂದ ನಕಾರಾತ್ಮಕವಾಗಿ ಬಿಂಬಿತಗೊಂಡಿರುವ ಯೋಗಿಯವರು ನಿಜ ಜೀವನದಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿಯಾಗಿಯೂ ಅವರು ಉತ್ತಮ ಕಾರ್ಯ ಮಾಡುತ್ತಾರೆ ಎಂಬ ನಿರೀಕ್ಷೆ ಜನರಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.