ಇಂಫಾಲ: ಮಣಿಪುರದಲ್ಲಿ 5 ತಿಂಗಳ ಹಿಂದೆ ವಿಧಿಸಲಾಗಿದ್ದ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ನಾಗಾಗಳು ಭಾನುವಾರ ಮಧ್ಯರಾತ್ರಿಯಿಂದ ಹಿಂಪಡೆದುಕೊಂಡಿದ್ದಾರೆ.
ಮಣಿಪುರದ ಸೇನಾಪತಿಯ ಉಪ ಕಮಿಷನರ್ ಕಛೇರಿಯಲ್ಲಿ ನಡೆದ ಕೇಂದ್ರ ಸರ್ಕಾರ, ಯುನೈಟೆಡ್ ನಾಗಾ ಕೌನ್ಸಿಲ್ ಮತ್ತು ಮಣಿಪುರದ ನೂತನ ಸರ್ಕಾರದ ನಡುವಣ ತ್ರಿಪಕ್ಷೀಯ ಮಾತುಕತೆಯ ಬಳಿಕ ನಾಗಾಗಳು ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡಿದ್ದಾರೆ.
ಈಶಾನ್ಯ ರಾಜ್ಯಗಳ ಗೃಹ ಖಾತೆ ರಾಜ್ಯ ಸಚಿವ ಸತ್ಯೇಂದ್ರ ಗಾರ್ಗ್ ಅವರು ಕೇಂದ್ರ ಸರ್ಕಾರವನ್ನು ಮಾತುಕತೆಯಲ್ಲಿ ಪ್ರತಿನಿಧಿಸಿದ್ದರು.
ಮಣಿಪುರದಲ್ಲಿ 7 ಹೊಸ ಜಿಲ್ಲೆಗಳ ಘೋಷನೆಯನ್ನು ವಿರೋಧಿಸಿ ನಾಗಾ ಸಮುದಾಯದವರು ಆರ್ಥಿಕ ದಿಗ್ಬಂಧನ ಹಾಕಿದ್ದರು. ನಾಗಾ ಬಾಹುಳ್ಯವುಳ್ಳ ಪ್ರದೇಶವನ್ನು ಇಬ್ಭಾಗಗೊಳಿಸಿದರೆ ಚುನಾವಣೆಯಲ್ಲಿ ನಮ್ಮ ಪ್ರಾಬಲ್ಯ ಕುಂಠಿತವಾಗಲಿದೆ ಎಂಬುದು ನಾಗಾಗಳ ಅನಿಸಿಕೆಯಾಗಿದೆ.
ಇವರು ವಿಧಿಸಿದ್ದ ಆರ್ಥಿಗ ದಿಗ್ಬಂಧನದ ಪರಿಣಾಮವಾಗಿ ಹಣದುಬ್ಬರ, ಬೆಲೆಯೇರಿಕೆ ಸಮಸ್ಯೆ, ಆಹಾರ, ಔಷಧಿಗಳ ಕೊರತೆ ಎದುರಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.