ನ್ಯೂ ಡೆಲ್ಲಿ : ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತ ಪ್ರಧಾನಿ ಮೋದಿ ಸರ್ಕಾರದ ಬಲಕ್ಕಿಂತ “ಜನ ಶಕ್ತಿ ” ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಚಳುವಳಿಯಂತೆ ಜನರ ಸಾಮೂಹಿಕ ಆಶಯಗಳಿಂದ ಚಲಿಸಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಂತ ಇನ್ನೊಂದು ಚಳುವಳಿಯ ಅವಶ್ಯಕತೆ ಇದೆ ಎಂದು ಇಂಡಿಯ ಟುಡೆ ಕಾನ್ ಕ್ಲೇವ್ ನಲ್ಲಿ ಮಾತಾಡುತ್ತ ಪ್ರಧಾನಿ ಮೋದಿ ಹೇಳಿದರು.
‘ಹೊಸ ಭಾರತ ‘ ಅಭಿಯಾನ ಒಂದು ‘ಅವಕಾಶ’ ಹೊರತು ‘ಉಪಕಾರ’ ವಲ್ಲ ಎಂದು ಪ್ರಧಾನಿ ಹೇಳಿದರು.
ತಂತ್ರಜ್ಞಾನ ಸಾಕಷ್ಟು ಬದಲಾಗಿದೆ. ನಾವು ಯುವಕರ ಆಶಯಗಳ ತೀವ್ರತಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಹಿಂದೆ ನಿರ್ಧಾರಗಳು ಚುನಾವಣಾ ಫಲಿತಾಂಶ ಆಧರಿಸಿ ತೆಗೆದುಕೊಳ್ಳಲಾಗುತ್ತಿತ್ತು ಈಗ ಪರಿಸ್ಥಿತಿ ಬದಲಾಗಿದೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರ ವಿವಿಧ ವಲಯಗಳಲ್ಲಿ ತೆಗೆದುಕೊಂಡ ಕ್ರಮಗಳನ್ನು ವಿವರಿಸುತ್ತ ಮೋದಿ ಅವರು, “ಭಾರತದ ಆರ್ಥಿಕತೆ ಬಲಿಷ್ಟವಾಗಿ ರೂಪಾಂತರಗೊಳ್ಳುತ್ತಿದೆ, ರೈಲ್ವೆ, ವಿದ್ಯುದ್ದೀಕರಣ, ಉತ್ಪಾದನ ಕ್ಷೇತ್ರಗಳು ಪ್ರಾಮುಖ್ಯತೆ ಪಡೆಯುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.