ನವದೆಹಲಿ: ಸ್ವಚ್ಛಭಾರತ ಅಭಿಯಾನದಡಿ ಮುಂದಿನ ಹಣಕಾಸು ವರ್ಷದ ಅಂತ್ಯದೊಳಗೆ ದೇಶದ 1 ಲಕ್ಷ ಮದರಸಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಕೇಂದ್ರ ಮುಂದಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಾಹಿತಿ ನೀಡಿದ್ದಾರೆ.
ದೇಶವನ್ನು ಸಂಪೂರ್ಣ ಬಯಲು ಶೌಚಮುಕ್ತವನ್ನಾಗಿಸುವ ಗುರಿ ಹೊಂದಿರುವ ಕೇಂದ್ರ ಇದುವರೆಗೆ ಲಕ್ಷಗಟ್ಟಲೆ ಶೌಚಾಲಯಗಳನ್ನು ನಿರ್ಮಿಸಿದೆ ಮತ್ತು ನಿರ್ಮಿಸುತ್ತಿದೆ.
174,828 ಗ್ರಾಮಗಳನ್ನು, 118 ಜಿಲ್ಲೆಗಳನ್ನು, 3 ರಾಜ್ಯಗಳನ್ನು ಈಗಾಗಲೇ ಸಂಪೂರ್ಣ ಬಯಲು ಶೌಚಮುಕ್ತವೆಂದು ಘೋಷಿಸಲಾಗಿದೆ.
ದೇಶವನ್ನು ಸ್ವಚ್ಛವಾಗಿಸುವ ಸಲುವಾಗಿ 2014ರ ಅ.2ರಂದು ಪ್ರಧಾನಿ ನರೇಂದ್ರ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದರು. ಅಲ್ಲಿಂದ ಸ್ವಚ್ಛತೆ ಬಗ್ಗೆ ದೇಶದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಾಣುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.