ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ನಯಾ ಪೈಸೆಯೂ ಖರ್ಜಾಗಲ್ಲ ಎಂಬ ಮಾಹಿತಿಯನ್ನು ಪಿಎಂಓ ನೀಡಿದೆ.
ಮೋದಿಯವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಸಂಪೂರ್ಣ ಖರ್ಚುವೆಚ್ಚಗಳ ಮಾಹಿತಿ ನೀಡುವಂತೆ ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪಿಎಂಓ ದಾಖಲೆ ಸಮೇತವಾದ ಉತ್ತರವನ್ನು ಮನೀಶ್ ಸಿಸೋಡಿಯಾ ಅವರಿಗೆ ನೀಡಿದೆ.
‘ಮೋದಿ ಸಮಾಜಿಕ ಜಾಲತಾಣಗಳ ನಿರ್ವಹಣೆಗೆ ಯಾವುದೇ ವೆಚ್ಚವಾಗುವುದಿಲ್ಲ, ಪ್ರಧಾನಿ ಅಧಿಕೃತ ಮೊಬೈಲ್ ಅಪ್ಲಿಕೇಶನ್ ‘ಪಿಎಂಓ ಇಂಡಿಯಾ’ವನ್ನು ಮೈಗೌ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದು, ಪ್ರಶಸ್ತಿ ರೂಪದಲ್ಲಿ ಅವರಿಗೆ ನೀಡಿದ ಹಣ ಬಿಟ್ಟರೆ ಇದಕ್ಕೆ ಬೇರೆ ಯಾವ ರೀತಿಯ ಖರ್ಚು ಆಗಿಲ್ಲ. ಇದರ ನಿರ್ವಹಣೆಯನ್ನು ಪಿಎಂಓ ನೋಡಿಕೊಳ್ಳುತ್ತಿದೆ’ ಎಂದು ಪಿಎಂಓ ಹೇಳಿದೆ.
ಉಳಿದಂತೆ ಮೋದಿಯ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಪಿಎಂಓನೇ ನೋಡಿಕೊಳ್ಳುತ್ತದೆ, ಇದಕ್ಕಾಗಿ ಯಾವುದೇ ಪ್ರತ್ಯೇಕ ಹಣ ವ್ಯಯವಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಅಲ್ಲದೇ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್, ಗೂಗಲ್, ಜಿಮೇಲ್ ಮುಂತಾದ ಯಾವುದೇ ಕಡೆಯೂ ಪಿಎಂಓ ಸೋಶಲ್ ಮೀಡಿಯಾ ಕ್ಯಾಂಪೇನನ್ನು ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಅದು, ಗೂಗಲ್ ಪ್ಲೇಸ್ಟೋರ್ನಲ್ಲಿ ’ಪಿಎಂಓ ಇಂಡಿಯಾ’ ಅಪ್ಲಿಕೇಶನ್ ಲಭ್ಯವಿದೆ. ಅಧಿಕೃತ ವೆಬ್ಸೈಟ್ಗಳಲ್ಲಿ ಸರ್ಕಾರದ ಮಾಹಿತಿ, ಪ್ರಧಾನಿ ಭಾಷಣ, ಅವರ ಭೇಟಿಯ ಅಪ್ಡೇಟ್ಗಳನ್ನು ಹಾಕಲಾಗುತ್ತದೆ. ಇದನ್ನು ಪಿಎಂಓ ಸಿಬ್ಬಂದಿಗಳೇ ನೋಡಿಕೊಳ್ಳುತ್ತಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.