ನವದೆಹಲಿ: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿಯೊಬ್ಬಳು ಅತ್ಯುನ್ನತ ಹಾಗೂ ಪ್ರತಿಷ್ಠಿತ ವಿಜ್ಞಾನ ಮತ್ತು ಗಣಿತ ಸ್ಪರ್ಧೆಯೊಂದನ್ನು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆಯುಂಟು ಮಾಡಿದ್ದಾಳೆ. ಮಾತ್ರವಲ್ಲ ಬರೋಬ್ಬರಿ 250,000 ಯುಎಸ್ ಡಾಲರ್ ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾಳೆ.
17 ವರ್ಷದ ಇಂದ್ರಾಣಿ ದಾಸ್ ಅಮೆರಿಕಾದ ಅತ್ಯಂತ ಹಳೆಯ ವಿಜ್ಞಾನ ಮತ್ತು ಗಣಿತ ಸ್ಪರ್ಧೆಯಲ್ಲಿ, ‘ಬ್ರೈನ್ಗಳಿಗೆ ಸಂಭವಿಸುವ ಗಾಯ ಮತ್ತು ನರಕೋಶ ಕಾಯಿಲೆಯಿಂದ ಸಂಭವಿಸುವ ನರಗಳ ಸಾವನ್ನು ಹೇಗೆ ತಡೆಗಟ್ಟಬಹುದು’ ಎಂಬ ಬಗ್ಗೆ ಸಲ್ಲಿಸಿದ ಸಂಶೋಧನ ಪ್ರಬಂಧವನ್ನು ಮಂಡಿಸಿದ್ದಾಳೆ.
ಅವಳ ಈ ಸಂಶೋಧನೆಗೆ ‘ಸೈನ್ಸ್ ಟ್ಯಾಲೆಂಟ್ ಸರ್ಚ್ ಅವಾರ್ಡ್’ ದೊರೆತಿದೆ.
ಈ ಸ್ಪರ್ಧೆಯಲ್ಲಿ ಅರ್ಜುನ್ ರಮನಿ ಎಂಬ 15 ವರ್ಷದ ಭಾರತೀಯ ಮೂಲದ ಬಾಲಕ 3ನೇ ಸ್ಥಾನ ಪಡೆದು, 150,000 ಯುಎಸ್ ಡಾಲರ್ ಗೆದ್ದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.