ನವದೆಹಲಿ: ಹಣವಂತರು ಬಹಳಷ್ಟು ಮಂದಿ ಇರುತ್ತಾರೆ, ಆದರೆ ಹಣವಂತರಲ್ಲಿ ಹೃದಯವಂತರು ಬೆರಳೆನಿಕೆಯಷ್ಟು ಮಂದಿ ಮಾತ್ರ ಇರುತ್ತಾರೆ. ಅಂತಹ ಹೃದಯವಂತರಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಒಬ್ಬರು.
ಈ ಹಿಂದೆಯೂ ಇವರು ಸಂಕಷ್ಟದಲ್ಲಿದ್ದ ರೈತರಿಗೆ, ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಹಾಯಹಸ್ತ ಚಾಚಿದ್ದರು. ತಮ್ಮ ಮಾನವೀಯ ಕಾರ್ಯವನ್ನು ಈಗಲೂ ಮುಂದುವರೆಸಿರುವ ಅವರು ಇತ್ತೀಚಿಗಷ್ಟೇ ಛತ್ತೀಸ್ಗಢದ ಸುಕ್ಮಾದಲ್ಲಿ ರಕ್ಕಸ ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿರುವ ಹುತಾತ್ಮ ಯೋಧರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
ಹುತಾತ್ಮರಾದ 12 ಸಿಆರ್ಪಿಎಫ್ಯೋಧರ ಕುಟುಂಬಗಳಿಗೆ ತಲಾ 9 ಲಕ್ಷ ರೂಪಾಯಿಯಂತೆ ಅವರು 1.08 ಕೋಟಿಯನ್ನು ನೀಡಿದ್ದಾರೆ.
ಸುಕ್ಮಾ ದಾಳಿ ನಡೆದ ಬಳಿಕ ಸಿಆರ್ಪಿಎಫ್ ಡಿಐಜಿ ಲೋಧಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅಕ್ಷಯ್ ಯೋಧರ ಪ್ರತಿ ಮಾಹಿತಿಯನ್ನೂ ಪಡೆಯುತ್ತಿದ್ದರು. ಬಳಿಕ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಅವರು ಮುಂದಾಗಿದ್ದಾರೆ.
ಅಕ್ಷಯ್ ಹೃದಯವಂತಿಕೆಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಲೋಧಾ ಹೇಳಿದ್ದಾರೆ.
ಅಕ್ಷಯ್ ಹೃದಯವಂತಿಕೆಗೆ ಸರ್ಕಾರ ಮಾತ್ರವಲ್ಲ ಇಡೀ ದೇಶವೇ ಸೆಲ್ಯೂಟ್ ಹೊಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.