ಬಳ್ಳಾರಿ: ದುಶ್ಚಟಗಳ ವಿರುದ್ಧ ಸಮರ ಸಾರಿರುವ ವ್ಯಕ್ತಿಯೋರ್ವ, ಸೈಕಲ್ ಮೇಲೆ ದೇಶವೆಲ್ಲ ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಭಾಗವಾಗಿ ಇದೀಗ ಜಗದ್ವಿಖ್ಯಾತ ಹಂಪಿಗೆ ಆಗಮಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಪಂಜಾಬ್ ಮೂಲದ 53 ವರ್ಷದ ಅಮನ್ ದೀಪಸಿಂಗ್ ಎಂಬುವರೇ ಆ ಅಪರೂಪದ ವ್ಯಕ್ತಿ. ಇವರ ಸೋದರ ಮಾವನ ಸಾವಿಗೆ ಅತೀ ಮದ್ಯವ್ಯಸನವೇ ಕಾರಣವಾಗಿತ್ತಂತೆ. ಅವರ ಸಾವು ಅಮನ್ದೀಪ್ ಮೇಲೆ ಗಾಢ ಪರಿಣಾಮ ಬೀರಿದೆ. ಇದರ ಪ್ರತಿಫಲವೇ ಜಾಗೃತಿ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಬೆಂಗಳೂರಿನ ಲಾಲ್ಬಾಗ್ನ ಗುರುದ್ವಾರ್ ಗುರುನಾನಕ್ ಸಂಸ್ಥೆಯ ಅಧೀನದ ಪಂಜಾಬಿ ಶಾಲೆಯಲ್ಲಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಅಮನ್ದೀಪ್ ಸಿಂಗ್ ಸ್ವಯಂ ನಿವೃತ್ತಿ ಪಡೆದರು. ದುಶ್ಚಟಗಳ ವಿರುದ್ಧದ ಹೋರಾಟಕ್ಕೆ ಸೈಕಲ್ ಮೂಲಕ ಜಾಗೃತಿಗೆ ಮುಂದಾದರು.
ಸೈಕಲ್ ಜನಜಾಗೃತಿಯನ್ನು ೨೦೦೮ ರಲ್ಲಿ ಆರಂಭಿಸಿದ ಇವರು, ಅಂದಾಜು ೨೬ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಶಾಲೆ, ಕಾಲೇಜುಗಳಿಗೂ ತೆರಳಿ ಜಾಗೃತಿ ಮೂಡಿಸುವ ಇವರು, ಸಾರ್ವಜನಿಕರಿಗೂ ದುಶ್ಚಟಗಳ ಕುರಿತಾಗಿ ಮನವರಿಕೆ ಮಾಡುತ್ತಿದ್ದಾರೆ.
ಕೇರಳ, ದಿಯು ದಾಮನ್, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಜಮ್ಮ ಕಾಶ್ಮೀರ, ಉತ್ತರಾಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಘಡ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಪ್ರವಾಸ ಮುಗಿಸಿ ಇದೀಗ ಕರ್ನಾಟಕದ ಹಂಪಿಗೆ ಆಗಮಿಸಿದ್ದಾರೆ.
ವಿಶೇಷವಾಗಿ ಇಂದಿನ ಯುವ ಪೀಳಿಗೆ ಲಿಂಗ ತಾರತಮ್ಯವಿಲ್ಲದೇ ದುರ್ವ್ಯಸನಗಳ ದಾಸರಾಗುತ್ತಿದ್ದಾರೆ. ಯುವಶಕ್ತಿಯೇ ರಾಷ್ಟ್ರಶಕ್ತಿ ಎಂಬ ಮಾತಿಗೆ ಪ್ರತಿಕೂಲ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಶಕ್ತಿಯನ್ನು ಉದ್ದೀಪನಗೊಳಿಸುವ, ಉತ್ತಮ ಬದುಕಿಗೆ ಮಾರ್ಗದರ್ಶನ ನೀಡುವಲ್ಲಿ ಅಮನ್ದೀಪ್ ಸಿಂಗ್ ಕಾರ್ಯ ಸ್ತುತ್ಯಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.