ಇಸ್ಲಾಮಾಬಾದ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್ -ಬಲ್ತಿಸ್ತಾನ್ ಪ್ರದೇಶವನ್ನು ತನ್ನ ೫ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿದೆ ಎನ್ನಲಾಗಿದೆ.
ಪಾಕಿಸ್ಥಾನದ ಈ ನಿರ್ಧಾರ ಭಾರತ-ಪಾಕ್ನ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಪ್ರದೇಶ ಭಾರತದ ಗಡಿಯಾದ ವಿವಾದಿತ ಪಿಓಕೆಯಲ್ಲಿರುವ ಕಾರಣ ಭಾರತ ಪಾಕ್ ನಿರ್ಧಾರವನ್ನು ವಿರೋಧಿಸುವ ಸಾಧ್ಯತೆ ಇದೆ.
ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಝ್ ಅಜೀಜ್ ಅವರ ನೇತೃತ್ವದ ಸಮಿತಿಯು ಗಿಲ್ಗಿಟ್-ಬಲ್ತಿಸ್ತಾನ್ಗೆ ಪ್ರಾಂತೀಯ ಸ್ಥಾನಮಾನ ನೀಡಲು ಶಿಫಾರಸ್ಸು ಮಾಡಿದೆ ಎಂಬುದಾಗಿ ಪಾಕಿಸ್ಥಾನದ ಅಂತರ್ರಾಜ್ಯ ಸಹಕಾರ ಸಚಿವ ರಿಯಾಝ್ ಹುಸೇನ್ ಪಿಝಡ ಅವರು ಟಿವಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಗಿಲ್ಗಿಟ್-ಬಲ್ತಿಸ್ತಾನ್ನನ್ನು ಪಾಕಿಸ್ಥಾನದ ಪ್ರಾಂತ್ಯವನ್ನಾಗಿಸಬೇಕು, ಈ ಪ್ರದೇಶದಿಂದ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ ಸಾಗುತ್ತಿರುವ ಹಿನ್ನಲೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದಾಗಿ ರಿಯಾಝ್ ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.