ಪುಣೆ: ಬಿಜೆಪಿಯ ನಾಲ್ಕು ಬಾರಿಯ ಪಾಲಿಕೆ ಸದಸ್ಯೆ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್ ಅವರ ವಂಶಸ್ಥೆ ಮುಕ್ತಾ ತಿಲಕ್ ಪುಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮುಕ್ತಾ ತಿಲಕ್ ಅವರು 98 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ನಂದಾ ಲೋನ್ಕಾರ್ ಕಾಂಗ್ರೆಸ್ ಕಾರ್ಪೋರೇಟರ್ಗಳ ಮತಗಳು ಸೇರಿ ಒಟ್ಟು 52 ಮತಗಳನ್ನು ಗಳಿಸಿದ್ದಾರೆ. ಶಿವಸೇನೆ ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.
ಬಿಜೆಪಿ ಕಳೆದ ತಿಂಗಳು ನಡೆದ ಪುಣೆ ಪುರಸಭಾ ಚುನಾವಣೆಯಲ್ಲಿ 162 ಸ್ಥಾನಗಳಲ್ಲಿ 98 ಸ್ಥಾನಗಳನ್ನು ಜಯಿಸಿತ್ತು. ಬಿಜೆಪಿ ಇದೇ ಮೊದಲ ಬಾರಿ ಪುರಸಭಾ ಚುನಾವಣೆಯಲ್ಲಿ ಬಹುಮತ ಪಡೆದಿದೆ.
ಬಿಜಪಿ ಮಿತ್ರ ಪಕ್ಷ ಆರ್ಪಿಐ (ಎ) ಇದರ ನವನಾಥ್ ಕಾಂಬ್ಳೆ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರು 98 ಮತಗಳನ್ನು ಗಳಿಸಿದರೆ ಕಾಂಗ್ರೆಸ್ನ ಲತಾ ರಾಜ್ಗುರು 52 ಮತಗಳನ್ನು ಗೆದ್ದುಕೊಂಡಿದ್ದಾರೆ.
56ನೇ ಮೇಯರ್ ಆಗಿ ಆಯ್ಕೆಯಾಗಿರುವ ಮುಕ್ತಾ ತಿಲಕ್ ಅವರನ್ನು ಕಸ್ಬಾ ಪೇಟ್ನಿಂದ ಆಯ್ಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.