ಬೆಳ್ತಂಗಡಿ : ಬಡಗಕಾರಂದೂರು ಗ್ರಾಮದ ಮುಳ್ಳಗುಡ್ಡೆ ಸಮೀಪದ ನಿವಾಸಿ ಸುಂದರ ಎಂಬವರ ಮಗಳು ಸುಶ್ಮಾ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗಂಭೀರಗಾಯವಾಗಿದ್ದು ಚಿಕಿತ್ಸೆಗೂ ತೊಂದರೆಯಾಗಿದ್ದು ತೀರ ಬಡತನದಲ್ಲಿರುವ ಇವರಿಗೆ ನೆರವಾಗುವ ಉದ್ಧೇಶದಿಂದ ಕರಾವಳಿ ಕೇಸರಿ ಕ್ಲಬ್ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಡುವ ಯೋಜನೆಯೊಂದನ್ನು ರೂಪಿಸಿ ಸಾರ್ವಜನಿಕರ ಸಹಕಾರದಲ್ಲಿ ಮನೆ ನಿರ್ಮಾಣದ ಕೆಲಸವನ್ನು ಪ್ರಾರಂಬಿಸಿದೆ.
ಈ ಸಂಘಟನೆಯ ಮಹತ್ಕಾರ್ಯಕ್ಕೆ ನೆರವನ್ನು ನೀಡುವ ಉದ್ಧೇಶದಿಂದ ಯುವ ನ್ಯಾಯಾವಾದಿ ಹರೀಶ್ ಪೂಂಜ ಇತ್ತೀಚೆಗೆ ಮುಳ್ಳಗುಡ್ಡೆ ಸುಂದರ ಮನೆಗೆ ಭೇಟಿ ನೀಡಿ ಮಗುವಿನ ಕ್ಷೇಮ ಸಮಚಾರ ತಿಳಿದುಕೊಂಡರು.
ಇವರೊಂದಿಗೆ ಬಿ.ಜೆ.ಪಿ ಯುವ ಮೋರ್ಚಾದ ಉಪಾಧ್ಯಕ್ಷ ರಕ್ಷಿತ್ ಶೆಟ್ಟಿ, ಸಂಘದ ಪ್ರಮುಖರಾದ ರವಿ ಇಳಂತಿಲ, ಕರಾವಳಿ ಕೇಸರಿಕ್ಲಬ್ಅಧ್ಯಕ್ಷ ಸಮೀತ್ರಾಜ್, ಸುಧೀರ್ ಧರೆಗುಡ್ಡೆ, ಗ್ರಾ.ಪಂ ಸದಸ್ಯರಾದ ಮೋಹನ್ದಾಸ್, ಸುಪ್ರೀತ್ ಜೈನ್ ಅಳದಂಗಡಿ, ವಿಜಯ ಕುಮಾರ್ ಜೈನ್ ಅಳದಂಗಡಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.