ಕೊಚಿ: ಕ್ಯಾನ್ಸರ್ ಮತ್ತು ಹೃದಯರೋಗ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಸಹಾಯಕ್ಕಾಗಿ ಆಸ್ಟರ್ ಡಿಎಂ ಫೌಂಡೇಶನ್ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೊತೆ ಸಹಭಾಗಿತ್ವ ವಹಿಸಿದೆ ಎಂದು ಆಸ್ಟರ್ ಡಿಎಂ ಫೌಂಡೇಶನ್ ಘೋಷಿಸಿದೆ.
ಪ್ರತಿ ವರ್ಷ ಈ ಸಂಸ್ಥೆ 18 ವರ್ಷದೊಳಗಿನ 50 ನಕ್ಕಳ ಚಿಕಿತ್ಸೆಗೆ ಸಹಕರಿಸಲಿದೆ.
‘ಆಸ್ಟರ್ ಡಿಎಂ ಸಹಭಾಗಿತ್ವ ಯೋಜನೆ’ ಅಡಿಯಲ್ಲಿ ಮಕ್ಕಳ ಕ್ಯಾನ್ಡರ್ ಮತ್ತು ಹೃದ್ರೋಗ ಚಿಕಿತ್ಸೆಗೆ ಅನುದಾನ ನೀಡಲಿದ್ದು, ಉಳಿದ ವೆಚ್ಚವನ್ನು ಆಸ್ಟರ್ ಫೌಂಡೇಶನ್ ಆಸ್ಪತ್ರೆ ಭರಿಸಲಿದೆ.
ಆಸ್ಟರ್ ಡಿಎಂ ಸಹಭಾಗಿತ್ವ ಯೋಜನೆ ಆರಂಭಿಕವಾಗಿ 4 ವರ್ಷಗಳ ಕಾಲ ನಡೆಯಲಿದೆ.
ಕೊಚಿಯಲ್ಲಿರುವ ಆಸ್ಟರ್ ಮೆಡ್ಸಿಟಿ, ಕೋಝಿಕೋಡ್ನ ಆಸ್ಟರ್ ಎಂಐಎಂಎಸ್, ಹಾಗೂ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆ ಈ ಅನನ್ಯ ಯೋಜನೆ ಅಅಡಿಯಲ್ಲಿ ಮಕ್ಕಳಿಗೆ ವಿವಿಧ ಸೌಕರ್ಯಗಳನ್ನು ಒದಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.