ಬೆಳ್ತಂಗಡಿ : ಟಿಪ್ಪರ್ನ ಅತೀ ವೇಗದ ಚಾಲನೆಯಿಂದಾದ ಅಪಘಾತದಲ್ಲಿ ಯಾತ್ರಾರ್ಥಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡ ಘಟನೆ ಶನಿವಾರ ಗೇರುಕಟ್ಟೆ ಬಳಿ ಸಂಭವಿಸಿದೆ.
ಈಚರ್ ಟಿಪ್ಪರ್ ಇನೋವಾಕಾರಿಗೆಡಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಚಾಮರಾಜನಗರ ಕೊಳ್ಳೆಗಾಲ ನಿವಾಸಿ ಶಾರದಾ( 58) ಮೃತಪಟ್ಟವರು. ಇನೋವಾದಲ್ಲಿದ್ದ ಶಾರದಾ ಅವರ ಪತಿ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು, ವಾಹನದ ಚಾಲಕ ಪ್ರಭು, ಶಾರದಾ ಅವರ ಪುತ್ರಿ ವಿಜಯಲಕ್ಷ್ಮೀ, ರಾಜಲಕ್ಷ್ಮೀ, ಶಿವ, ಮಕ್ಕಳಾದ ದೀಕ್ಷಾ ಹಾಗೂ ಶ್ರೇಯ ಗಾಯಗೊಂಡಿದ್ದಾರೆ. ಗಂಭೀರವಾಗಿಗಾಯಗೊಂಡಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದೆ.
ಗುರುವಾಯನಕೆರೆಕಡೆಯಿಂದ ಕೆಂಪು ಕಲ್ಲು ಹೊತ್ತೊಯ್ಯುತ್ತಿದ್ದ ಈಚರ್ಟಿಪ್ಪರ್ ಲಾರಿ ಅತೀ ವೇಗದಿಂದ ಬಂದು ಗೇರುಕಟ್ಟೆಕೊರಂಜ ಸರ್ಕಾರಿ ಶಾಲೆಯ ಬಳಿ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಇನೋವಾ ವಾಹನಕ್ಕೆ ಎದುರಿನಿಂದಡಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿಯಾಗಿದೆ. ಟಿಪ್ಪರ್ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ರಸ್ತೆ ಬದಿಯ ಮಣ್ಣಿಗೆ ಎಸೆಯಲ್ಪಟ್ಟಿದ್ದು, ವಾಹನದಲ್ಲಿದ್ದವರು ಒಳಗಡೆ ಸಿಕ್ಕಿಹಾಕಿಕೊಂಡಿದ್ದರು. ತಕ್ಷಣ ಸ್ಥಳೀಯ ಯುವಕರು ಸೇರಿ ವಾಹನದಲ್ಲಿದ್ದಎಲ್ಲರನ್ನೂ ಹೊರಗೆತರುವಲ್ಲಿ ನೆರವಾಗಿದ್ದಾರೆ.
ಅಪಘಾತವಾದ ತಕ್ಷಣ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್ ಚಾಲಕ ಗೇರುಕಟ್ಟೆ ಪೇಟೆಯಲ್ಲಿಯೇ ಅತೀ ವೇಗದಿಂದ ಚಲಾಯಿಸುತ್ತಿದ್ದ ಎಂದು ಸ್ಥಳಿಯರು ತಿಳಿಸಿದ್ದಾರೆ. ಅತೀ ವೇಗವಾಗಿ ಚಲಾಯಿಸುತ್ತಿದ್ದ ಚಾಲಕ ಮುಂದಿನಿಂದ ಹೋಗುತ್ತಿದ್ದ ವಾಹನ ಸಡನ್ ಆಗಿ ಬ್ರೇಕ್ ಹಾಕಿದಾಗ ಟಿಪ್ಪರ್ ಚಾಲಕ ವಾಹನ ನಿಲ್ಲಿಸದೆ ಬಲ ಬದಿಗೆ ನುಗ್ಗಿಸಿದ್ದಾನೆ. ಎದುರಿನಿಂದ ಬರುತ್ತಿದ್ದ ಇನೋವಾಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಇನೋವಾದ ಎಡಬದಿಯಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆ. ಡಿಕ್ಕಿಯಾದ ರಭಸಕ್ಕೆ ಇನೋವಾ ನುಜ್ಜಾಗಿದ್ದು, ಬಾಗಿಲುಗಳು ಲಾಕ್ಆಗಿದ್ದವು. ಸ್ಥಳಿಯ ಯುವಕರು ಬಾಗಿಲು ಒಡೆದು ಎಲ್ಲರನ್ನು ಹೊರತರುವಲ್ಲಿ ಸಹಕರಿಸಿದ್ದಾರೆ ಕೊಳ್ಳಗಾಲದಿಂದ ಬಸವರಾಜು ಅವರ ಕುಟುಂಬ ಶನಿವಾರ ಬೆಳಿಗ್ಗೆ ಧರ್ಮಸ್ಥಳಕ್ಕೆ ಹೊರಟಿದ್ದರು. ಸ್ಥಳಕ್ಕೆ ಶಾಸಕ ಕೆ.ವಸಂತ ಬಂಗೇರ, ಬೆಳ್ತಂಗಡಿ ವೃತ್ತನಿರೀಕ್ಷಕ ಲಿಂಗಪ್ಪ ಪೂಜಾರಿ, ಎಸ್ಐಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.