ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಗೆದ್ದಿದ್ದು, ಮಣಿಪುರ ಮತ್ತು ಗೋವಾದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೂ ಸರ್ಕಾರ ರಚನೆ ಅತಂತ್ರವಾಗಿದೆ.
ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಿಗೆ ಬಿಜೆಪಿ 325 ಸ್ಥಾನ, ಎಸ್ಪಿ ಮತ್ತು ಕಾಂಗ್ರೆಸ್ಗೆ 54, ಬಿಎಸ್ಪಿಗೆ 19, ಇತರೆ 5 ಸ್ಥಾನ ಗಳಿಸಿದೆ.
ಉತ್ತರಾಖಂಡದಲ್ಲಿ 70 ಸ್ಥಾನಗಳಿಗೆ ಬಿಜೆಪಿಗೆ 57 ಸ್ಥಾನಗಳು ಲಭಿಸಿವೆ. ಕಾಂಗ್ರೆಸ್ಗೆ 11, ಇತರೆ 2 ಸ್ಥಾನ ಗಳಿಸಿದೆ.
ಪಂಜಾಬ್ನಲ್ಲಿ 117 ಸ್ಥಾನಗಳಿಗೆ ಕಾಂಗ್ರೆಸ್ 77, ಎಎಪಿಗೆ 22, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ 18 ಸ್ಥಾನ ಗಳಿಸಿದೆ.
ಮಣಿಪುರದಲ್ಲಿ 58 ಸ್ಥಾನಗಳಿಗೆ ಕಾಂಗ್ರೆಸ್ 25, ಬಿಜೆಪಿಗೆ 21, ಇತರೆ 11 ಸ್ಥಾನ ಗಳಿಸಿದೆ.
ಗೋವಾದಲ್ಲಿ 40 ಸ್ಥಾನಗಳಿಗೆ ಕಾಂಗ್ರೆಸ್ 17, ಬಿಜೆಪಿ 13, ಇತರೆ 10 ಸ್ಥಾನ ಗಳಿಸಿದೆ.
ದೇಶದ ಅತೀದೊಡ್ಡ ರಾಜ್ಯ ತನ್ನ ತೆಕ್ಕೆಗೆ ಬಿದ್ದಿರುವುದು ಬಿಜೆಪಿಗೆ ಮತ್ತಷ್ಟು ಬಲವನ್ನು ತುಂಬಿದೆ. ಪಂಜಾಬ್ ಬಿಟ್ಟರೆ ಉಳಿದ ಯಾವ ರಾಜ್ಯದಲ್ಲೂ ಕಾಂಗ್ರೆಸ್ಗೆ ಏಕಪಕ್ಷೀಯವಾಗಿ ಸರ್ಕಾರ ರಚಿಸುವ ಯಶಸ್ಸು ಸಿಕ್ಕಿಲ್ಲ.
ಗೋವಾ, ಪಂಜಾಬ್ನಲ್ಲಿ ಗೆಲುವು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ಅವರ ಎಎಪಿಗೆ ತೀವ್ರ ಮುಖಭಂಗವಾಗಿದೆ.
ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿ ಅಲೆ ಮತ್ತು ಅಮಿತ್ ಷಾ ಪರಿಶ್ರಮ ಕೆಲಸ ಮಾಡಿದೆ. ಇವರ ಮುಂದೆ ಬಿಎಸ್ಪಿ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದು, ಸಮಾಜವಾದಿ-ಕಾಂಗ್ರೆಸ್ ಮೈತ್ರಿ ನೆಲಕಚ್ಚಿದೆ. ರಾಹುಲ್, ಪ್ರಿಯಾಂಕ ಪ್ರಚಾರವೂ ಮೋಡಿ ಮಾಡಿಲ್ಲ. ಇನ್ನು ಉತ್ತರಾಖಂಡದಲ್ಲಿ ಸ್ವತಃ ಕಾಂಗ್ರೆಸ್ ಸಿಎಂ ಅವರೇ ಸೋಲುಂಡಿದ್ದಾರೆ. ಮಣಿಪುರದಲ್ಲೂ ಕಾಂಗ್ರೆಸ್ನ್ನು ಜನ ತಿರಸ್ಕರಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ನೋಟ್ ಬ್ಯಾನ್ ಕ್ರಮವನ್ನೇ ಮುಂದಿಟ್ಟುಕೊಂಡು ಬಿಜೆಪಿಯನ್ನು ಎದುರಿಸಲು ಹೊರಟಿದ್ದ ಪ್ರತಿಪಕ್ಷಗಳು ಮುಖಭಂಗ ಅನುಭವಿಸಿವೆ. ಜನ ನೋಟ್ ಬ್ಯಾನ್ನಿಂದ ವಿಚಲಿತಗೊಂಡಿಲ್ಲ ಎಂಬುದಕ್ಕೆ ಈ ಚುನಾವಣಾ ಫಲಿತಾಂಶವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.