ನವದೆಹಲಿ: ಕಾರ್ಯಕ್ಷೇತ್ರದ ವಾತಾವರಣವನ್ನು ತನ್ನ ಮಹಿಳಾ ಸಿಬ್ಬಂದಿಗಳಿಗೆ ಸ್ನೇಹಮಯವಾಗಿಸುವ ಸಲುವಾಗಿ ಶಸಸ್ತ್ರ ಸೀಮಾ ಬಲ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮೊದಲ ಬಾರಿ ಗಡಿ ಕಾಯುತ್ತಿರುವ ಮಹಿಳಾ ಯೋಧೆಯರು ಪ್ರೈವೇಟ್ ಬ್ಯಾರಕ್ ಕ್ಯೂಬಿಕಲ್ಸ್ ಮತ್ತು ಸ್ಯಾನಿಟರಿ ಪ್ಯಾಡ್ ದಹನ ಯಂತ್ರಗಳನ್ನು ಪಡೆಯಲಿದ್ದಾರೆ.
ಗಡಿಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸೈನಿಕರಿಗಾಗಿ ಬ್ಯಾರಕ್ಸ್ಗಳಲ್ಲಿ ಪ್ರತ್ಯೇಕ ಲಿವಿಂಗ್ ಬ್ಲಾಕ್ಗಳನ್ನು ನಿರ್ಮಿಸಲಾಗಿದೆ ಮತ್ತು ಸ್ಯಾನಿಟರಿ ನ್ಯಾಪ್ಕಿನ್ ಡಿಸ್ಪೆನ್ಸರ್ ಮತ್ತು ಇನ್ಸಿನರೇಟರ್ಸ್ಗಳನ್ನು ಅಳವಡಿಸಲಾಗಿದೆ ಎಂದು ಶಸಸ್ತ್ರ ಸೀಮಾ ಬಲದ ಡೈರೆಕ್ಟರ್ ಜನರಲ್ ಅರ್ಚನಾ ರಾಮಸುಂದರಮ್ ತಿಳಿಸಿದ್ದಾರೆ.
ಅಲ್ಲದೇ ಅವರಿಗಾಗಿ ಬಾಡಿ ಫಿಟ್ ಸೈಜ್ ಪ್ರೊಟೆಕ್ಟರ್ಸ್ ಬುಲೆಟ್ ಪ್ರೂಫ್ ವೆಸ್ಟ್ಸ್, ಹೆಲ್ಮೆಟ್ಸ್, ಶೂ, ರೈನ್ಕೋಟ್ಗಳಿಗೂ ಆರ್ಡರ್ ನೀಡಲಾಗಿದೆ. ಇಂಡೋ-ಭೂತಾನ್ ಮತ್ತು ಇಂಡೋ-ನೇಪಾಳ ಗಡಿಗಳಲ್ಲಿ ಶೌಚಾಲಯಗಳನ್ನೂ ಮಹಿಳಾ ಖಾಸಗಿತನಕ್ಕೆ ಅನುಕೂವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.
ಮಹಿಳಾ ಸಿಬ್ಬಂದಿಗಳು ತಮ್ಮ ಉಡುಪುಗಳನ್ನು ಒಗೆಯಲು ಮತ್ತು ಒಣಗಿಸಲು ಸುಲಭವಾಗುವಂತೆ ಬ್ಯಾರಕ್ ಪ್ರದೇಶಗಳ ಎಲ್ಲಾ ಘಟಕಗಳಲ್ಲೂ ವಾಷಿಂಗ್ ಮೆಶಿನ್ ಹಾಗೂ ಡ್ರೈಯಿಂಗ್ ರ್ಯಾಕ್ಗಳನ್ನು ಅಳವಡಿಸಲಾಗಿದೆ ಎಂದು ಅರ್ಚನಾ ಮಾಹಿತಿ ನೀಡಿದ್ದಾರೆ.
ಅಲ್ಲದೇ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಗಳಿಗಾಗಿ ಟಾಯ್ಲೆಟ್ನ್ನು ಒಳಗೊಂಡ ವಿಶೇಷ ಬಸ್ನ್ನು ಶೀಘ್ರದಲ್ಲೇ ತರಲಾಗುವುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.