×
Home About Us Advertise With s Contact Us

ಬೇಸಿಗೆ ಶಿಬಿರ ಉದ್ಘಾಟನೆ

ಕಲ್ಲಡ್ಕ: ಪ್ರಕೃತಿ ಮನುಷ್ಯನ ಪ್ರಗತಿಗೆ ಪೂರಕವಾಗಿದೆ. ನಾವು ಪ್ರಕೃತಿಯನ್ನು ಶೋಷಣೆ ಮಾಡದೆ ಅದನ್ನು ಪೋಷಣೆ ಮಾಡುವುದರ ಮೂಲಕ ಪ್ರಕೃತಿಯ ಅರಾಧಕರು ನಾವಾಗಬೇಕು. ಸದ್ಗುಣಗಳನ್ನು ಬೆಳೆಸುವ ಈ ಶಿಬಿರ ಯಶಸ್ವಿಯಾಗಲೆಂದು ಸಂವರ್ಧನ ಮತ್ತು ಹೊಂಬೆಳಕು ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಶ್ರೀ ಉಪೇಂದ್ರ ಬಲ್ಯಾಯ ಹೇಳಿದರು.

Besige-shibira

ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಪೂರಕವಾಗಿದ್ದು, ಶಿಬಿರದಿಂದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶ್ರೀರಾಮ ವಿದ್ಯಾಕೆಂದ್ರದ ಸಂಚಾಲಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಸದಾಶಿವ ರೈ ಸೂರಂಬೈಲು, ಲೋಕೇಶ್ ಕೆ., ಮೊಹಿದ್ದೀನ್, ರಾಕೇಶ್ ದಂಪತಿಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತ ಮಾಧವ ಶ್ರೀಮಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಲೋಹಿತ್ ಸ್ವಾಗತಿಸಿ, ಗೌತಮ್ ವಂದಿಸಿದರು.

 

Recent News

Back To Top
error: Content is protected !!