ಸುಳ್ಯ : ಸುಳ್ಯ ಕಸಬಾದ ಶ್ರೀ ಕಾನತ್ತಿಲ ಉಳ್ಳಾಕುಳು, ಪುರುಷ, ರುದ್ರಾಂಡಿ ಮತ್ತು ಪರಿವಾರ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.9ರಿಂದ 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಹೇಮನಾಥ ಕುರುಂಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವೀಕರಣಗೊಂಡ ದೈವಸ್ಥಾನಗಳಲ್ಲಿ ವೇದಮೂರ್ತಿ ಉಬ್ರಂಗಳ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಮೇ.9 ರಂದು ಸುಳ್ಯದ ವಿವಿಧ ಭಾಗಗಳಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಬಂದು ಉಗ್ರಾಣ ತುಂಬಿಸಲಾಗುವುದು. ಬಳಿಕ ವಾಸ್ತು ಬಲಿ, ಹೋಮ ಹವನಾದಿಗಳು ನಡೆಯಲಿವೆ. ಮೇ.11ರಂದು ಬೆಳಿಗ್ಗೆ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಮೇ.14ರಂದು ದೈವಗಳ ಭಂಡಾರ ತಂದು ಮೇ.15ರಂದು ಉಳ್ಳಾಕುಳು ಪುರುಷ ಹಾಗೂ ಪರಿವಾರ ದೈವಗಳ ನೇಮ ನಡಾವಳಿ ನಡೆಯಲಿದೆ.
ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಹಾಗೂ ಹಲವಾರು ಉಪಸಮಿತಿಗಳಲ್ಲಿ ಸುಳ್ಯ ಗ್ರಾಮದ ನೂರಾರು ಮಂದಿ ದುಡಿ ಯುತ್ತಿದ್ದು, ಬ್ರಹ್ಮಕಲಶೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ವಿವಿಧ ಸಮಿತಿಗಳ ಪ್ರಮುಖರಾದ ಕೇರ್ಪಳ ಲಿಂಗಪ್ಪ ಮಾಸ್ತರ್, ರಮಾನಾಥ ಕಾನತ್ತಿಲ, ಬಾಲಚಂದ್ರ ಕೆ, ದಿನಕರ ಕೆ, ಐ.ಬಿ. ಚಂದ್ರಶೇಖರ್, ದಿನೇಶ್ ಮಡಪ್ಪಾಡಿ, ಕೆ.ಆರ್. ಗಂಗಾಧರ, ರಘುನಾಥ ಜಟ್ಟಿಪಳ್ಳ, ಕಿರಣ್ ಕುರುಂಜಿ, ಅರುಣ್ಕುಮಾರ್, ಜಯಪ್ರಕಾಶ್ ಕಾನತ್ತಿಲ ಮತ್ತಿತರರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.