ನವದೆಹಲಿ: ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ ಎಂಬ ಸಂದೇಶ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ ನೀಡಿ ಭಾರೀ ವಿವಾದ ಸೃಷ್ಟಿಸಿದ್ದ ದೆಹಲಿಯ ವಿದ್ಯಾರ್ಥಿನಿ ಹಾಗೂ ಹುತಾತ್ಮ ಯೋಧನ ಪುತ್ರಿ ಗುರುಮೆಹರ್ ಕೌರ್ ಅವರಿಗೆ ಮತ್ತೋರ್ವ ಹುತಾತ್ಮನ ಪುತ್ರಿ ಬುದ್ಧಿಮಾತು ಹೇಳಿದ್ದಾರೆ.
ಪಠಾನ್ಕೋಟ್ ಹುತಾತ್ಮ ಲ್ಯಾನ್ಸ್ ನಾಯ್ಕ್ ಮೂಲ್ರಾಜ್ ಅವರ ಪುತ್ರಿ ಪೂಜಾ, ‘ನಿಮ್ಮ ತಂದೆಯ ಬಲಿದಾನವನ್ನು ಅಪಹಾಸ್ಯ ಮಾಡಬೇಡಿ’ ಎಂದು ಕೌರ್ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಕೌರ್ ಅವರು 1999ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಕ್ಯಾ.ಮನದೀಪ್ ಸಿಂಗ್ ಅವರ ಪುತ್ರಿ. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಸಂದೇಶ ದೇಶವ್ಯಾಪಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಕೆಲವರು ಇವರ ಪರ ನಿಂತರೆ ಇನ್ನು ಕೆಲವರು ಇವರನ್ನು ಟೀಕಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.