ಮೂಡುಬಿದಿರೆ: ಪಂಜಾಬ್ ವಿಶ್ವವಿದ್ಯಾನಿಲಯ ಚಂಡೀಗಢ ಆಶ್ರಯದಲ್ಲಿ ಚಂಡೀಗಢದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಪ್ರಥಮ ಬಾರಿಗೆ ಪುರುಷರ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ 59 ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿದ ಕಣ್ಣನ್ ವಿಜಯನ್ ಬೆಳ್ಳಿ ಪದಕ, 83 ಕೆಜಿ ವಿಭಾಗದಲ್ಲಿ ಜಯದೀಪ್ ಕಂಚಿನ ಪದಕ, 93 ಕೆಜಿ ವಿಭಾಗದಲ್ಲಿ ಕೃಷ್ಣಕುಮಾರ್ ಬೆಳ್ಳಿ ಪದಕ, 105 ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಪಡೆಯುವುದರೊಂದಿಗೆ ದ್ವಿತೀಯ ರನ್ನರ್ ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಹಿಳೆಯರ 62 ಕೆಜಿ ವಿಭಾಗದಲ್ಲಿ ಮರೀನಾದೇವಿ ಮತ್ತು 84 ಕೆಜಿ ವಿಭಾಗದಲ್ಲಿ ಉಷಾ ಬಿ.ಎನ್. ಚಿನ್ನದ ಪದಕ ಪಡೆದಿದ್ದು ಪದಕ ವಿಜೇತ ಎಲ್ಲಾ ಕ್ರೀಡಾಪಟುಗಳು ಆಳ್ವಾಸ್ ಕಾಲೇಜು ಮೂಡುಬಿದಿರೆ ವಿದ್ಯಾರ್ಥಿಗಳು. ಕರ್ನಾಟಕ ರಾಜ್ಯದಲ್ಲೇ ಮಂಗಳೂರು ವಿಶ್ವವಿದ್ಯಾನಿಲಯ ಪದಕ ವಿಜೇತ ಏಕೈಕ ವಿಶ್ವವಿದ್ಯಾನಿಲಯ ಎನ್ನುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.