ನವದೆಹಲಿ: ನಗದು ವ್ಯವಹಾರಗಳನ್ನು ತಗ್ಗಿಸುವ ಉದ್ದೇಶದಿಂದ 4ಕ್ಕಿಂತ ಹೆಚ್ಚು ಬಾರಿ ಹಣಕಾಸು ವಹಿವಾಟು ನಡೆಸುವ ಎಚ್ಡಿಎಫ್ಸಿ, ಐಸಿಐಸಿಐ ಮತ್ತು ಇತರ ಬ್ಯಾಂಕ್ಗಳ ಗ್ರಾಹಕರು ಮಾ.1ರಿಂದ ಶುಲ್ಕ ಪಾವತಿಸಬೇಕಾಗುತ್ತದೆ.
ಒಂದು ತಿಂಗಳಿಗೆ 4 ಬಾರಿ ನಡೆಸಬಹುದಾದ ಉಚಿತ ಬ್ಯಾಂಕ್ ವಹಿವಾಟಿನ ನಂತರ 5ನೇ ಹಾಗೂ ಅದಕ್ಕಿಂತ ಹೆಚ್ಚು ವಹಿವಾಟುಗಳಿಗೆ ಶುಲ್ಕ ವಿಧಿಸುವ ಬಗ್ಗೆ ಖಾಸಗಿ ಬ್ಯಾಂಕ್ಗಳು ಗ್ರಾಹಕರಿಗೆ ಸೂಚನೆ ನೀಡಿವೆ.
ಗ್ರಾಹಕರು 5 ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಹಣ ವಿತ್ಡ್ರಾ ಅಥವಾ ಠೇವಣಿ ವ್ಯವಹಾರ ನಡೆಸಿದಲ್ಲಿ ಶುಲ್ಕ ವಿಧಿಸಲಾಗುವುದು. ಇದು ಎಟಿಎಂ ವಿತ್ಡ್ರಾವಲ್ಗಳಿಗೆ ಅನ್ವಯಿಸುವುದಿಲ್ಲ. ಪ್ರತಿ 1000 ರೂ. ವಹಿವಾಟಿಗೆ ರೂ. 5 ಶುಲ್ಕ ಅಲ್ಲದೇ ಸೇವಾ ತೆರಿಗೆ ಸೇರಿದಂತೆ ರೂ.150 ಶುಲ್ಕ ವಿಧಿಸುವ ಬಗ್ಗೆ ಬ್ಯಾಂಕ್ಗಳು ಸೂಚಿಸಿವೆ.
ಇದಲ್ಲದೇ ಗ್ರಾಹಕರು ಪ್ರತಿ ತಿಂಗಳು ರೂ. 2 ಲಕ್ಷಕ್ಕಿಂತ ಮೇಲ್ಪಟ್ಟು ವ್ಯವಹಾರ ನಡೆಸಿದಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಎಚ್ಡಿಎಫ್ಸಿ ಬ್ಯಾಂಕ್ ಪ್ರಸ್ತಾಪಿಸಿವೆ.
ವಿವಿಧ ಬ್ಯಾಂಕ್ಗಳಿಗೆ ಸಂಬಂಧಿಸಿದಂತೆ ಶುಲ್ಕಗಳು ಬದಲಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.