ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನೋಟ್ ಬ್ಯಾನ್ನಂತಹ ಅತಿ ದಿಟ್ಟ ನಿರ್ಧಾರದ ಬಳಿಕವೂ ಭಾರತ ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಪ್ರಗತಿಯಾಗಿ ತನ್ನ ಓಟವನ್ನು ಮುಂದುವರೆಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಇದ್ದ 7.4 ಜಿಡಿಸಿ ಪ್ರಗತಿ ದರ ಈ ಬಾರಿ 7ಕ್ಕೆ ಇಳಿದಿದ್ದರೂ ಭಾರತ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ. ನೆರೆಯ ಚೀನಾದ ಜಿಡಿಪಿ ಪ್ರಗತಿ 6.8 ಇದ್ದು ನಂ.2 ಸ್ಥಾನದಲ್ಲಿದೆ.
ನವೆಂಬರ್ 8ರಂದು ಪ್ರಧಾನಿ 500.ರೂ ಮತ್ತು 1000.ರೂ ನೋಟುಗಳ ನಿಷೇಧದ ಬಗ್ಗೆ ಘೋಷಣೆ ಮಾಡಿದ ಬಳಿಕ ನಗದು ರೂಪದ ವ್ಯವಹಾರಕ್ಕೆ ಹೆಚ್ಚಾಗಿ ಅಂಟಿಕೊಂಡಿರುವ ನಮ್ಮ ದೇಶದ ಆರ್ಥಿಕತೆ ತುಸು ಏರಿಳಿತವನ್ನು ಕಂಡಿತು. ಇದರಿಂದಾಗಿ ಜಿಡಿಪಿ ದರ ಕೊಂಚ ಇಳಿಕೆಯಾಗಿದೆ, ಆದರೆ ಇದರಿಂದ ಆರ್ಥಿಕತೆಯ ಮೇಲೆ ಯಾವುದೇ ದುಷ್ಪರಿಣಾಮಗಳು ಆಗಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ನೋಟು ಬ್ಯಾನ್ನಿಂದ ಉದ್ಭವಿಸಿದ ಸಮಸ್ಯೆಗಳು ತಾತ್ಕಲಿಕವಾಗಿತ್ತು ಮತ್ತು ಅದೆಲ್ಲವೂ ಈಗ ಸರಿಹೋಗಿದೆ. ಆದರೆ ಕೆಲವರು ಮಾತ್ರ ನೋಟ್ ಬ್ಯಾನ್ ನಿಷೇಧದಿಂದ ಭಯಾನಕ ದುಷ್ಟರಿಣಾಮಗಳಾಗಿವೆ ಎಂದು ಬೊಬ್ಬಿಡುತಿದ್ದಾರೆ. ಆದರೆ ಅವರ ಮಾತುಗಳು ನಿಜವಲ್ಲ ಎಂಬುದೇ ತೃಪ್ತಿದಾಯಕ ವಿಷಯವಾಗಿದೆ. ಈಗಲೂ ನಾವು ಶೇಕಡಾ 7ರಷ್ಟು ಜಿಡಿಪಿ ದರವನ್ನು ಕಾಯ್ದುಕೊಂಡಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.