ಹುಬ್ಬಳ್ಳಿ: ಕಾನೂನು ವೃತ್ತಿಯ ಮೂಲಕವೂ ದೇಶವನ್ನು ಸದೃಢವನ್ನಾಗಿ ಮಾಡಲು ಸಾಧ್ಯ ಎಂದು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾ.ಡಾ.ವಿನೀತ ಕೊಠಾರಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ವಕೀಲಿ ವೃತ್ತಿಯ ಅವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕಾನೂನು ಪದವಿಧರರಿಗೆ ವೃತ್ತಿಯಲ್ಲಿ ವಿಫುಲ ಅವಕಾಶಗಳಿವೆ ಎಂದು ತಿಳಿಸಿದರು.
ವೃತ್ತಿಯ ಕೆಳಗಿನ ಸ್ಥರಗಳಲ್ಲಿ ಹೆಚ್ಚಿನ ದಟ್ಟಣೆ ಇದ್ದು ಮೇಲಿನ ಸ್ಥರಗಳಲ್ಲಿ ಹುದ್ದೆಗಳು ಖಾಲಿಯಾಗಿದೆ ಎಂದ ಅವರು, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಮೇಲಿನ ಸ್ಥರದಲ್ಲಿರುವ ಹುದ್ದೆಗಳನ್ನು ಅಲಂಕರಿಸಬಹುದು ಎಂದರು.
ದೇಶದ ಬೆಳವಣಿಗೆಯಲ್ಲಿ ವಕೀಲರ ಪಾತ್ರವನ್ನು ವಿವರಿಸಿದ ಅವರು, ಕಾನೂನು ಜ್ಞಾನ ಸಮಾಜದಲ್ಲಿ ಮುಂದೆ ಬರಲು ಹಾಗೂ ಸಮಾಜವನ್ನು ಮುನ್ನಡೆಸುವ ಶಕ್ತಿಯನ್ನು ನೀಡುತ್ತದೆ. ಎಲ್ಲರಲ್ಲೂ ತಮ್ಮ ವೃತ್ತಿಯ ಬಗ್ಗೆ, ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಬಗ್ಗೆ ಹಾಗೂ ದೇಶದ ಬಗ್ಗೆ ಜವಾಬ್ದಾರಿ ಪ್ರಜ್ಞೆ ಇರಬೇಕು. ಈ ಪ್ರಜ್ಞೆಯು ವೃತ್ತಿಗೆ, ಸಂಸ್ಥೆಗೆ ಕೀರ್ತಿಯನ್ನು ತಂದುಕೊಡುತ್ತದೆ ಎಂದು ಹೇಳಿದರು.
ಉತ್ತಮ ಸಂಶೋಧನೆ, ಸವಾಲುಗಳನ್ನು ಸ್ವೀಕರಿಸುವ ತಯಾರಿ ಹಾಗೂ ಸವಿಸ್ತಾರವಾದ ಓದು ಒಬ್ಬ ವಕೀಲನನ್ನು ಶ್ರೇಷ್ಠ ವಕೀಲನಾಗಿ ಪರಿವರ್ತಿಸುತ್ತದೆ. ವಿದ್ಯಾರ್ಥಿಗಳು ಶ್ರೇಷ್ಠ ವಕೀಲರಾಗುವ ಪ್ರಯತ್ನ ಮಾಡಬೇಕೆಂದರು.
ಪ್ರಭಾರಿ ಕುಲಪತಿ ಡಾ. ಸಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ವೃತ್ತಿ ಒಂದು ಶ್ರೇಷ್ಠವಾದ ವೃತ್ತಿಯಾಗಿದೆ. ಸತತ ಪರಿಶ್ರಮದಿಂದ ಹಾಗೂ ಸಮರ್ಪಣಾ ಭಾವದಿಂದ ಈ ವೃತ್ತಿಯನ್ನು ಕೈಗೊಳ್ಳಬೇಕು ಎಂದರು.
ಮೌಲ್ಯಮಾಪನ ವಿಭಾಗದ ಪ್ರಭಾರಿ ಕುಲಸಚಿವ ಡಾ. ಜಿ. ಬಿ. ಪಾಟೀಲ, ಕಾನೂನು ಶಾಲೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.