ನವದೆಹಲಿ: ಅಂಧರ ವಿಶ್ವಕಪ್ ತಂಡವನ್ನು ಭೇಟಿ ಮಾಡಿ ಅವರೊಂದಿಗೆ ಸಂವಹನ ನಡೆಸಿದ ಪ್ರಧಾನಿ ಮೋದಿ ಅವರು ಅಂಧರ ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಶುಭಾಶಯಗಳು. ಉತ್ತಮ ಪ್ರದರ್ಶನ ತೋರುತ್ತಿರಿ. ಮತ್ತು ಭಾರತ ಹೆಮ್ಮೆ ಪಡುವಂತೆ ಮಾಡಿ ಎಂದು ಹೇಳಿದ್ದಾರೆ.
ಅಂಧರ ವಿಶ್ವಕಪ್ ತಂಡದ ಚಾಂಪಿಯನ್ ಆಟಗಾರರ ಜೊತೆ ಸ್ಮರಣೀಯ ಸಂವಹನ ನಡೆಸಿದ್ದೇನೆ.
ಈ ಅವಿಸ್ಮರಣೀಯ ಪ್ರವಾಸದ ಸಂದರ್ಭದಲ್ಲಿ ಕ್ರಿಕೆಟಿಗರಿಗೆ ಬೆಂಬಲ ನೀಡಿದ ತಂಡದ ತರಬೇತುದಾರರು, ಆಟಗಾರರ ಪೋಷಕರು, ಶಿಕ್ಷಕರು, ಮಿತ್ರರಿಗೂ ಶುಭಾಶಯ ಕೋರುತ್ತಿರುವುದಾಗಿ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.
ಹಿರಿಯ ಆಟಗಾರರಿಂದ ಪ್ರೇರಣೆ ಪಡೆದು, ತಮ್ಮ ಶಾಲಾ ದಿನಗಳಿಂದಲೇ ಕ್ರಿಕೆಟ್ ಆಟವನ್ನು ಇವರು ಆಯ್ಕೆ ಮಾಡಿಕೊಂಡಿದ್ದರು. ಇಂದು, ಇವರು ನಮ್ಮೆಲ್ಲರಿಗೂ ಪ್ರೇರಣೆ ಆಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Had a memorable interaction with our champion cricketers, the winners of the T-20 Cricket World Cup for the Blind. pic.twitter.com/9idxuh8Qj8
— Narendra Modi (@narendramodi) February 28, 2017
Inspired by their seniors, most of these cricketers picked up the game in their school days. Today, they are an inspiration to all of us!
— Narendra Modi (@narendramodi) February 28, 2017
I also congratulate the coaches, parents, friends & teachers of these cricketers who supported them during this unforgettable journey.
— Narendra Modi (@narendramodi) February 28, 2017
Best wishes to the entire team that won the T-20 Cricket World Cup for the Blind. Keep playing well and making India proud of your game.
— Narendra Modi (@narendramodi) February 28, 2017
ಟಿ-20 ತಂಡದಲ್ಲಿರುವ ಅಜಯ್ ಕುಮಾರ್ ರೆಡ್ಡಿ, ಫರ್ಹಾನ್, ಡುನ್ನಾ ವೆಂಕಟೇಶ್ವರ, ಸುನಿಲ್, ಪ್ರಕಾಶ್ ಜಯರಾಮಯ್ಯ, ಪ್ರೇಮ್ ಕುಮಾರ್, ಟಿ. ದುರ್ಗಾ ರಾವ್, ಸುಕ್ರಾಂ ಮಾಝಿ, ಗಣೇಶ್ ಭಾಯ್ ಈಶ್ವರ್ ಭಾಯ್ ಮುಹುಂದ್ಕರ್, ಅನೀಶ್ ಬೇಗ್, ರಾಮ್ಬೀರ್ ಸಿಂಗ್, ದೀಪಕ್ ಮಲ್ಲಿಕ್, ಗೋಲು ಕುಮಾರ್, ಸೋನು ಗೋಲ್ಕರ್, ಝಫರ್ ಇಕ್ಬಾಲ್, ಫೈಜಲ್ ಇವರೊಂದಿಗಿರುವ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.