ನವದೆಹಲಿ: ಕಪ್ಪು ಹಣ ವಿರುದ್ಧ ಕಠಿಣ ಶಿಸ್ತುಕ್ರಮದ ಭಾಗವಾಗಿ ಕೇಂದ್ರ ಸರ್ಕಾರ ಸಾಂಸ್ಥಿಕ ಹಣ ದುರ್ಬಳಕೆಯನ್ನು ತಡೆಯಲು 6ರಿಂದ 7 ಲಕ್ಷ ಶೆಲ್ ಕಂಪೆನಿಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಪತ್ರಿಕೆಯ ವರದಿ ಪ್ರಕಾರ ದೇಶಾದ್ಯಂತ ನಗರಗಳಲ್ಲಿ ಇಂತಹ ಸುಪ್ತ ಕಂಪೆನಿಗಳು ಸುಮಾರು 7 ಲಕ್ಷದಷ್ಟು ಇವೆ ಎನ್ನಲಾಗಿದೆ.
ಹೆಚ್ಚಿನ ಮೌಲ್ಯದ ನೋಟುಗಳ ನಿಷೇಧದ ಬಳಿಕ ಈ ಕಂಪೆನಿಳು ಅತ್ಯಧಿಕ ಪ್ರಮಾಣದಲ್ಲಿ ವ್ಯವಹಾರ ನಡೆಸಿದ್ದು, ಬ್ಯಾಂಕ್ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹಣವನ್ನು ಠೇವಣಿ ಮಾಡಿವೆ ಎಂದು ವರದಿ ತಿಳಿಸಿದೆ.
ಶೆಲ್ ಕಂಪೆನಿಗಳು ಯಾವುದೇ ಗಮನಾರ್ಹ ಬಂಡವಾಳ ನಿಧಿ ಅಥವಾ ಕಾರ್ಯಾಚರಣೆ ನಡೆಸದೇ ವ್ಯಾಪಾರ ವಹಿವಾಟುಗಳನ್ನು ಕಾರ್ಯನಿರ್ವಹಿಸುವ ಕಂಪೆನಿಗಳಾಗಿವೆ.
ನೇರ ತೆರಿಗೆಗಳ ಕೇಂದ್ರ ಮಂಡಳಿ ಸೇರಿದಂತೆ ಇತರ ಸಂಸ್ಥೆಗಳ ಜೊತೆ ಸೇರಿ ಕೇಂದ್ರ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಕಂಪೆನಿಗಳು ಅತ್ಯಲ್ಪ ಬಂಡವಾಳ, ಹೆಚ್ಚಿನ ಮೀಸಲು, ಕೈಯಲ್ಲಿ ಹೆಚ್ಚಿನ ನಗದು, ಹೆಚ್ಚಿನ ಪ್ರೀಮಿಯಂ ಶೇರುಗಳ ರಶೀದಿ, ಹೆಸರುರಹಿತ ಕಂಪೆನಿಗಳಲ್ಲಿ ಹೂಡಿಕೆ ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.